ವಂಚನೆಗೊಳಪಟ್ಟ ಸಂತ್ರಸ್ತೆ ಮನೆಗೆ ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ನೇತೃತ್ವದ ನಿಯೋಗದಲ್ಲಿ ಕಾರ್ಯಕರ್ತರು ಸಂತ್ರಸ್ತೆಯ ತಾಯಿ ಮತ್ತು ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ.

ಬಳಿಕ ಮಗುವನ್ನು ನೋಡಿ, ಸಾಂತ್ವನ ಹೇಳಿ ಮಾಧ್ಯಮದ ಮುಂದೆ ಜಂಟಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ, ವಿಷಯ ಗೊತ್ತಾದಾಗ ನಾವೇ ಹೆಣ್ಣಿಗೆ ನ್ಯಾಯ ಕೊಡಿಸುವಲ್ಲಿ ಮಾತನಾಡಿದ್ದೇವೆ. ಆ ಸಂದರ್ಭ ಕೇಸು ಒಂದೇ ಪರಿಹಾರ ಅಲ್ಲ. ಎರಡು ಮನಸ್ಸುಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಬೇಕೆಂದು ಹೇಳಿದೆ ಹೊರತು ಅಬಾಷನ್ ಮಾಡಬೇಕೆಂದು ಹೇಳಿಲ್ಲ. ಹಣದ ಆಮಿಷವನ್ನೂ ನೀಡಿಲ್ಲ. ಇದು ರಸ್ತೆಯಲ್ಲಿ ನಿಂತು ಮಾತನಾಡುವ ವಿಷಯವಲ್ಲ. ನಾವು ಹೆಣ್ಣಿಗೆ ನ್ಯಾಯ ಸಿಗುವ ತನಕ ಅವರೊಂದಿಗೆ ಸ್ಪಷ್ಟವಾಗಿ, ಇರುತ್ತೇವೆ ಎಂದು ಹೇಳಿದ್ದೇವೆ. ನ್ಯಾಯ ಸಿಗುವ ತನಕ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ. ಬಳಿಕ ಸಂತ್ರಸ್ತೆಯ ತಾಯಿ ನಮಿತಾ ಅವರು ಮಾತನಾಡಿ, ನಾನು ಯಾವ ಸಂಘಟನೆಯಲ್ಲೂ ಇಲ್ಲ. ಮಗುವಿಗೆ ಅಪ್ಪನ ಸ್ಥಾನ ಕೊಡಿಸಿ ಎಂದು ಮನವಿಕೊಂಡಿದ್ದಾರೆ.



