ಯುವತಿಯೊಬ್ಬಳನ್ನು ವಂಚಿಸಿ, ಗರ್ಭವತಿಯನ್ನಾಗಿಸಿದ ಆರೋಪಿ ಶ್ರೀಕೃಷ್ಣ ಜೆ ರಾವ್ ಜೊತೆ ಪುತ್ತಿಲ ಪರಿವಾರದ ಪ್ರಜ್ವಲ್ ಘಾಟೆ ಸೆಲ್ಫಿ ತೆಗೆದ ಫೋಟೊ ವೈರಲ್ ಆಗಿದೆ.

ಆರೋಪಿ ಕಾರಿನಲ್ಲಿ ತಲೆ ಕೆಳಗೆ ಹಾಕಿ ಪುತ್ತಿಲ ಪರಿವಾರದ ಜೊತೆ ಕುಳಿತಿರುವ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಾಯಿದೆ. ಆದ್ರೆ ಪೊಲೀಸರು ಮಾತ್ರ ಈ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಪುತ್ತಿಲ ಪರಿವಾರ ಈ ವಿಚಾರವಾಗಿ ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ.



