ಮದುವೆಯಾವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮನೆಗೆ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭೇಟಿ ನಿಡಿದ್ದಾರೆ.

ಸಂತ್ರಸ್ತೆ ಹಾಗೂ ಹೆತ್ತವರಿಗೆ ಧೈರ್ಯ ತುಂಬಿದ ಪ್ರತಿಭಾ ಕುಳಾಯಿ ಅವರು, ಬಳಿಕ ಸಂತ್ರಸ್ತೆ ತಾಯಿಗೆ ಧನಸಹಾಯ ಮಾಡಿದ್ದಾರೆ. ನಿಮ್ಮೆಲ್ಲ ಕಷ್ಟದ ಜೊತೆ ನಾನು ಭಾಗಿಯಾಗುತ್ತೇನೆ. ನಿಮ್ಮ ಯಾವುದೇ ಖರ್ಚು ವೆಚ್ಚಗಳಿದ್ದರೂ ಅದನ್ನ ನಾನು ಭರಿಸುತ್ತೇನೆ. ಆ ಮೂಲಕ ಸಂತ್ರಸ್ತೆಯ ತಾಯಿಗೆ ಪ್ರತಿಭಾ ಕುಳಾಯಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಕುಳಾಯಿ ಅವರೇ ಫೋನ್ ಮೂಲಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರನ್ನು ಸಂಪರ್ಕಿಸಿ ಬಳಿಕ ಸಂತ್ರಸ್ತೆಯ ತಾಯಿ ನಮಿತಾ ಮಾತನಾಡಿಸಿದ್ದಾರೆ.



