ಪುತ್ತಿಲ ಪರಿವಾರದ ಜೊತೆ ಶ್ರೀ ಕೃಷ್ಣ ರಾವ್ ಇದ್ದ ಎಂಬ ವಿಚಾರ ಹಾಗೂ ಸೆಲ್ಫಿ ವಿಡಿಯೋ ವೈರಲ್ ಆಗಿತ್ತು.

ಇದೀಗ ಪುತ್ತಿಲ ಪರಿವಾರ ಮತ್ತು ತನ್ನ ವಿರುದ್ಧವಾದ ಆಪಾದನೆಗಳಿಗೆ ಆರ್ಯಾಪು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಜ್ವಲ್ ಘಾಟೆ ಸ್ಪಷ್ಟನೆಕೊಟ್ಟಿದ್ದಾರೆ. ಪ್ರಜ್ವಲ್ ಘಾಟೆ ಈಗ ಕುಟುಂಬ ಸಮೇತ ಬೆಂಗಳೂರಿನಲ್ಲಿದ್ದು, ಪುತ್ತೂರಿಗೆ ಬಂದ ನಂತರ ಸುಳ್ಳು ಆರೋಪ ಹೊರಿಸಿದವರ ಮೇಲೆ ಕಾನೂನಿನ ಕ್ರಮಕೈಗೊಳ್ಳುವ ಬಗ್ಗೆ ವಕೀಲರ ಬಳಿ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಶ್ರೀಕೃಷ್ಣ ಜೆ ರಾವ್ ಜೊತೆ ಪ್ರಜ್ವಲ್ ತೆಗೆದ ಸೆಲ್ಫಿ ವಿಡಿಯೋ ವೈರಲ್ ಆಗಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ಪ್ರಜ್ವಲ್ ತೆರೆ ಎಳೆದಿದ್ದಾರೆ.



