ಆತ ಮಾಡೆಲ್ ಆತನಿಗೆ ತನ್ನ ದೇಹ ಮತ್ತು ಮುಖವೇ ಆಸ್ತಿ. ಅದನ್ನ ಕಾಪಾಡಿಕೊಳ್ಳಲು ಹರಸಾಹಸವನ್ನೆ ಮಾಡುತ್ತಾರೆ.

ಆದರೆ ಅದೊಂದು ಸಣ್ಣ ಕಾರಣಕ್ಕೆ ಬಸ್ ಸಿಬ್ಬಂದಿಗಳು ಈತನ ಮೇಲೆ ಎರಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ, ದೇಹದ ಭಾಗಗಳಿಗೆ ಪರಚಿ ಬಾಸುಂಡೆ ಬರುವಂತೆ ರಾಡು, ದೊಣ್ಣೆಯಿಂದ ಥಳಿಸಿದ್ದು, ಬೆಲೆ ಬಾಳುವ ವಸ್ತು ದೋಚಿರುವ ಆರೋಪ ಕೇಳಿ ಬಂದಿದೆ. ಮಾಡೆಲ್ ಆಗಿರುವ ಧ್ರುವ್ ನಾಯ್ಕ್, ಥಾಯ್ ಲ್ಯಾಂಡ್‌ಗೆ ಹೋಗಿ ಜುಲೈ 1ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ರು. ಹೀಗೆ ಬಂದವರು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ರಾತ್ರಿ 11.30ಕ್ಕೆ ಬೆಂಗಳೂರಿನಿ0ದ ತಮ್ಮೂರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ರಾತ್ರಿ ಬಸ್ ಏರಲು ಬಂದವರು ನರಕ ಕಾಣುವಂತಾಗಿದೆ. ಹೌದು,ರಾತ್ರಿ 1 ಗಂಟೆಗೆ ತನ್ನ ಸ್ನೇಹಿತರ ಜೊತೆಗೆ ಊರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಬಳಿಗೆ ಧ್ರುವ್ ನಾಯ್ಕ್ ಬಂದಿದ್ರು. ಹೀಗೆ ಬಂದವರು ಓರ್ವ ಸ್ನೇಹಿತನ ಜೊತೆಗೆ ಕೆಳ ನಿಂತು ಸಿಗರೇಟ್ ಸೇದುತ್ತಿದ್ದರಂತೆ ಈ ವೇಳೆ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ಮೂವ್ ಮಾಡಿದ್ದ, ಈ ವೇಳೆ ಧ್ರುವ್ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಸೀ ಬರ್ಡ್ ಸಿಬ್ಬಂದಿ ಮತ್ತು ಧ್ರುವ್ ನಾಯ್ಕ್ ಮಧ್ಯೆ ಗಲಾಟೆ ಉಂಟಾಗಿದೆ.



