ಆರೋಪಿ ಕೃಷ್ಣ ಜೆ ರಾವ್ ಬಂಧನವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಶನಿವಾರ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ, ಸಂತ್ರಸ್ತೆಯ ತಾಯಿ ಜೊತೆಗೆ ಮಾತನಾಡಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಆರೋಪಿ ಕೃಷ್ಣ ರಾವ್‌ನನ್ನು ಬಂಧಿಸಲಾಗಿದೆ. ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಬಾರದು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಆಲೋಚಿಸಬೇಕಾಗಿದೆ. ನನ್ನ ಜಾಗದಲ್ಲಿ ಬೇರೆ ಯಾವುದೇ ಪಕ್ಷದವರಿದ್ದರೂ ರಾಜಕೀಯವನ್ನೇ ಮಾಡುತ್ತಿದ್ರು. ಆದರೆ ನಾನು ಹಾಗೇ ಮಾಡಿಲ್ಲ. ಇಬ್ಬರು ಒಂದಾಗಿ ಬಾಳಬೇಕೆಂಬುದೇ ನಮ್ಮ ಆಶಯ ಎಂದಿದ್ದಾರೆ. ಇದೇ ವೇಳೆ ಅರುಣ್ ಕುಮಾರ್ ಪುತ್ತಿಲ ಅವರ ಹೇಳಿಕೆಯಿಂದ ಬೇಸರವಾಗಿದೆ ಎಂದ್ರು.



