ಮರಳು ಮತ್ತು ಕಲ್ಲುಗಳು ಜನರಿಗೆ ಸುಲಭವಾಗಿ ಲಭಿಸಬೇಕು. ಕಾನೂನಿನ ಚೌಕಟ್ಟಿನ ಪ್ರಕಾರ ಕಲ್ಲುಗಾರಿಗೆ ಮಾಡಬೇಕು.

ಕಾನೂನು ಬಾಹಿರ ಚಟುವಟಿಗೆಗಳಿಗೆ ಅವಕಾಶ ನೀಡಬಾರದೆಂದು ಕೆಪಿಸಿಸಿ ಉಪಾಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ ಹೇಳಿದ್ದಾರೆ. ಇವರು ಮಂಗಳೂರಿನ ಮನಪಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಂಪು ಕಲ್ಲುಗಾರಿಕೆಗೆ ನಿಯಮದ ಸರಳೀಕರಣಕ್ಕೆ ಈಗಾಗಲೇ ಪ್ರಯತ್ನಗಳು ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ನನ್ನ ನಿರ್ಣಯಗಳನ್ನು ಹೇಳಿದ್ದೇನೆ. ಬೆಂಗಳೂರಿನಲ್ಲಿ ಈ ಬಗ್ಗೆ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಇಂದು ಕರಾವಳಿಯಲ್ಲಿ ಮರಳು ತುಂಬಿ ನೆರೆ ಆಗ್ತಾ ಇದೆ. ಅದರ ಕಾನೂನಾತ್ಮಕ ಮರಳುಗಾರಿಕೆಗೆ ಹೊಸದಾದ ಮರಳು ನೀತಿಯ ಅವಶ್ಯಕತೆ ಇದೆ. ಅದರ ಜಾರಿಯ ಬಗ್ಗೆ ಕೂಡಲೇ ಚರ್ಚೆ ನಡೆಯಲಿದೆ ಎಂದಿದ್ದಾರೆ.



