ಉಡುಪಿಯಲ್ಲಿ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಜೂನ್ ತಿಂಗಳಲ್ಲಿ ಆರಂಭಗೊಳ್ಳಬೇಕಿದ್ದ ನಾಡ ದೋಣಿ ಮೀನುಗಾರಿಕೆ ಹವಾಮಾನ ವೈಪರಿತದಿಂದಾಗಿ ಈ ವರ್ಷ ಎರಡು ವಾರ ತಡವಾಗಿ ಆರಂಭಗೊ0ಡಿದೆ.

ಸಾಮಾನ್ಯವಾಗಿ ವರ್ಷಂಪ್ರತಿ ತಿಂಗಳ ಮಧ್ಯದಲ್ಲಿ ಪ್ರಾರಂಭಗೊಳ್ಳುವುದು ವಾಡಿಕೆ. ಆದರೆ ಈ ವರ್ಷ ಮೇ ತಿಂಗಳಲ್ಲೇ ಮಳೆ ಶುರುವಾಗಿದ್ದರಿಂದ ಮಳೆ ಅಬ್ಬರ ಜೂನ್ ಕೊನೆತನಕ ಮುಂದುವರೆದಿತ್ತು. ಯಾಂತ್ರಿಕೃತ ಮೀನುಗಾರಿಕೆಗೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿಷೇಧ ಇರುತ್ತದೆ. ಈ ಅವಧಿಯಲ್ಲಿ ಸ್ಥಳೀಯವಾಗಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮಾಡುವುದು ವಾಡಿಕೆ.

ಅದರಂತೆ ಎರಡು ದಿನಗಳಿಂದ ಮೀನುಗಾರರು ಮೀನು ಬೇಟೆಗೆ ಇಳಿದಿದ್ದಾರೆ. ಇದರಿಂದಾಗಿ ಕಳೆದ ಒಂದು ತಿಂಗಳಿ0ದ ಮೀನು ಇಲ್ಲದೆ ಪರದಾಡಿದ್ದ ಮತ್ಸ್ಯ ಪ್ರಿಯರಿಗೆ ಇನ್ನು ಮುಂದೆ ಮೀನು ಸಿಗಲಿದೆ. ಸ್ಥಳೀಯವಾಗಿ ಬೂತಾಯಿ, ಬಂಗುಡೆ ,ಮುರು ಮೀನು, ನಾಡದೋಣಿ ಮೀನುಗಾರರಿಗೆ ಸಿಕ್ಕಿದೆ. ಅಬ್ಬರದ ಗಾಳಿ ಮಳೆ ನಡುವೆ ನಾಡ ದೋಣಿಗಳಲ್ಲಿ ಮೀನು ಹಿಡಿಯುವುದೇ ಒಂದು ಸಾಹಸ. ಕಡಲ ಮಕ್ಕಳು ನಿಜಕ್ಕೂ ಸಾಹಸಪ್ರಿಯರು. ಈ ವರ್ಷದ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂಬುದೇ ನಮ್ಮ ಆಶಯ.



