ಹೊಸದಿಲ್ಲಿ : ದೇಶದ ನಾಗರಿಕರು ತೆಗೆದುಕೊಂಡ ಸಾಲ ಮರುಪಾವತಿ ಪ್ರಕ್ರಿಯೆಗೆ ಬಂದಾಗ ಕಠಿಣ ಹಾಗೂ ಬೇಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಅಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿಕೆ ನೀಡಿದ್ದಾರೆ.ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಣ್ಣ ಸಾಲಗಾರರು ಪಡೆದಿರುವ ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಶ್ನೆಯೊಂದರಕ್ಕೆ ಈ ರೀತಿ ಉತ್ತರವನ್ನು ನಿರ್ಮಲ ಸೀತಾರಾಮನ್ ನೀಡಿದ್ದಾರೆ ಎಂದು ವರದಿಯಾಗಿದೆ.ಕೆಲವು ಬ್ಯಾಂಕ್‌ಗಳು ಕಠೋರ ನಿಯಮಗಳು ಹಾಗೂ ದರ್ಪ ಮತ್ತು ನಿಷ್ಕರುಣೆಯಿಂದ ಸಾಲ ಮರುಪಾವತಿಯನ್ನು ಅನುಸರಿಸಿವೆ ಎಂಬುದರ ಕುರಿತು ದೂರುಗಳನ್ನು ಸ್ವೀಕರಿಸಿದ್ದೇನೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಸಾಲ ಮರುಪಾವತಿ ಪ್ರಕ್ರಿಯೆಗೆ ಬಂದಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ಮಾನವೀಯತೆ ಮತ್ತು ಸೂಕ್ಷ್ಮತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಷಯವನ್ನು ಸಮೀಪಿಸಬೇಕು ಎಂದು ಸರಕಾರವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ” ಎಂದು ಹೇಳಿದರು ಎಂಬುದಾಗಿ ವರದಿಯಾಗಿದೆ.



