ಜನ ಮನದ ನಾಡಿ ಮಿಡಿತ

Advertisement

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ. ಕೊ.ಅ ಉಡುಪರ ಸಂಸ್ಮರಣ ಸಮಾರಂಭ

ಕಿನ್ನಿಗೋಳಿ : ಕಲೆ, ಸಂಸ್ಕೃತಿ ಪೋಷಣೆಯ ಜೊತೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ ಎಂದು ಕ್ಯಾಂಪ್ಕೋ ಲಿ. ಮಂಗಳೂರು ಅಧ್ಯಕ್ಷರಾದ ಕಿಶೋರ್‌ ಕುಮಾರ್‌ ಕೋಡ್ಗಿ ಹೇಳಿದರು. ಅವರು ಯುಗಪುರುಷ ಸಂಸ್ಥಾಪಕ ದಿ. ಕೋ ಅ ಉಡುಪ ಸಂಸ್ಮರಣ ಸಮಾರಂಭವು ಯುಗಪುರುಷ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯುಗಪುರುಷ ಸಂಸ್ಥೆ ಸ್ಥಳೀಯವಾಗಿ ಕಲೆಗೆ ಪ್ರೋತ್ಸಾಹವನ್ನು ನೀಡುವ ಜೊತೆ ಕಲಾವಿದನ ಕಲೆಗೆ ಗೌರವ ನೀಡಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.

ಬಾಲಕೃಷ್ಣ ಉಡುಪ ಅವರ ಸ್ಪೂರ್ತಿ ಕವನ ಸಂಕಲನ ವನ್ನು ಹಾಗೂ ದೇವೇಂದ್ರ ಅಮೀನ್ ಮುಲ್ಲಕಾಡು ಅವರ ಮಾಯದ ಮಾಣಿಕ್ಯ ಪುಸ್ತಕದ ಮರು ಮುದ್ರಣದ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾದ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ನೆರವೇರಿಸಿ ಮಾತನಾಡಿ ಸಮಾಜಕ್ಕೆ ಮಾಡುವ ನಿಸ್ವಾರ್ಥ ಸೇವೆಯ ಸಾರ್ಥಕ್ಯ ಯುಗಪುರುಷ ದ ಸಾರ್ಥಕ್ಯ ಎಂದರು.

ಈ ಸಂಧರ್ಭ ಕಟೀಲು ದೇವಲ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಆಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ತಾಳಿಪಾಡಿ ಗುತ್ತು ರಾಮಚಂದ್ರ ಶೆಟ್ಟಿ ಆಡಳಿತ ವ್ಯವಸ್ಥಾಪಕರು ವಿಜಯ ರೆಪ್ರಿಜರೇಶನ್ ಮುಂಬೈ, ರುಡಾಲ್ಪ್ ಜೋಯರ್ ನೊರೋನ್ಹ ಜನರಲ್ ಮೆನೇಜರ್ ಕಾರ್ಪೂರೇಟ್ ಕಮ್ಯುನಿಕೇಷನ್ ಎಂ ಆರ್ ಪಿ ಎಲ್, ಶ್ರೀ ಮತೀ ವಾಣಿ ಬಿ ಆಚಾರ್ಯ, ಡಾ. ನಯನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಕೋ ಆ ಉಡುಪ ಪ್ರಶಸ್ತಿ ಯನ್ನು ತುಳು-ಕನ್ನಡ ಸಾಹಿತಿ, ಯಕ್ಷಗಾನ ಅರ್ಥದಾರಿ, ಪತ್ರಕರ್ತರಾದ ಕದ್ರಿ ನವನೀತ ಶೆಟ್ಟಿ ಪ್ರಧಾನಿಸಲಾಯಿತು. ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕ ಸನ್ಮಾನ ವನ್ನು ರಾಘವೇಂದ್ರ ಉಡುಪ ಕಲ್ಲಾಜೆ ನೀಡಲಾಯಿತು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಸ್ಥಳೀಯ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು. ಯುಗಪುರುಷ ದ ಭುವನಾಭಿರಾಮ ಉಡುಪ ಸ್ವಾಗತಿಸಿ, ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿ, ಅನುಷಾ ನವೀನ್ ವಂದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು ಇವರಿಂದ “ಅತಿಕಾಯ-ಇಂದ್ರಜಿತು” ಯಕ್ಷಗಾನ ಬಯಲಾಟ ನಡೆಯಿತು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!