ದೇವಸ್ಥಾನ-ಭಜನಾ ಮಂದಿರಗಳನ್ನು ಅಜೀರ್ಣಾವಸ್ಥೆಯಲ್ಲಿಡಲು ಬಿಡದಿರಿ, ಊರಿನ ಕಷ್ಟದ ಜೊತೆಗೆ ಜೀವನವೂ ಕಷ್ಟಕರವಾಗಿರುವುದು.

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಲಿತವರೆಲ್ಲರೂ ಜೊತೆಯಾಗಿರಿ, ಹಿರಿಯರಿಗೆ ಗೌರವಿಸುವ ಕಾರ್ಯದೊಂದಿಗೆ ಧರ್ಮರಕ್ಷಣೆಯೇ ಅಂತಿಮವೆ0ದು ನೂತನ ಮಂದಿರದ ಜೀಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿರಿ. ವೈದ್ಯನಾಥನ ಮಣ್ಣಿನಲ್ಲಿ ಜುಮಾದಿ ದೈವದ ಅನುಗ್ರಹದಡಿ ಬಿಡುಗಡೆಯಾದ ವಿಜ್ಞಾನಪನಾ ಪತ್ರ ನಂದಾದೀಪದ0ತೆ ಬೆಳಗಿ ಕಾರ್ಯಗಳು ಯಶಸ್ವಿಯಾಗಲಿ ಎಂದು ಧಾರ್ಮಿಕ ಚಿಂತಕ, ಬಾಲಾಂಜನೇಯ ವ್ಯಾಯಾಮ ಶಾಲೆ ಕುಂಜತ್ತೂರು ಇಲ್ಲಿನ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು ಅಭಿಪ್ರಾಯಪಟ್ಟಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆಯ ಸುಂದರಿಭಾಗ್ ಹನುಮಾನ್ ನಗರದ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ ಮತ್ತು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಇದರ ನೂತನ ಮಂದಿರ ನಿರ್ಮಾಣದ ವಿಜ್ಞಾಪನಾ ಪತ್ರದ ಬಿಡುಗಡೆಯನ್ನು ಉಳ್ಳಾಲಬೈಲ್ ವೈದ್ಯನಾಥ ಕ್ಷೇತ್ರದಲ್ಲಿ ನೆರವೇರಿಸಿ ಮಾತನಾಡಿದ್ರು.



