ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯರಾದ “ಧರ್ಮ ಚಾವಡಿ” ತುಳು ಚಿತ್ರ ಜುಲೈ 11 ರಂದು ಬಿಡುಗಡೆಗೊಳ್ಳಲಿದೆ ಎಂದು ಹಿರಿಯ ನಟ ರಮೇಶ್ ರೈ ಕುಕ್ಕುವಳ್ಳಿ ಮಾಹಿತಿ ಕೊಟ್ಟಿದ್ದಾರೆ. ಚಿತ್ರತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಚಿತ್ರ ನಿರ್ದೇಶಕ ನಿತಿನ್ ರೈ ಮಾತನಾಡಿ, ಇದು ನನ್ನ ಎರಡನೇ ಚಿತ್ರ, ಚಿತ್ರದ ಟೀಸರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ಮುಂಬೈಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು, ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿದೆ. ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ನೋಡಿದ ಜನ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದ್ರು. ಇನ್ನು ಈ ಸುದ್ದಿಗೋಷ್ಠಿಯಲ್ಲಿ ನಟಿ ಧನ್ಯ ಪೂಜಾರಿ, ಚಿತ್ರ ನಿರ್ಮಾಪಕ ನಡುಬೈಲ್ ಜಗದೀಶ್ ಅಮೀನ್, ಸಂಗೀತ ನಿರ್ದೇಶಕ ಪ್ರಸಾದ್ ಕೆ. ಶೆಟ್ಟಿ, ಅರುಣ್ ರೈ ಪುತ್ತೂರು, ನೇಹಾ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ರು.



