ಜನ ಮನದ ನಾಡಿ ಮಿಡಿತ

Advertisement

ದಕ್ಷಿಣಕನ್ನಡ: ಮಳೆಗಾಲದಲ್ಲಿ ಕಾಣಸಿಗುವ ಹಾವುಗಳ ಬಗ್ಗೆ ಎಚ್ಚರದ ಜೊತೆಗೆ ಅನುಕಂಪವಿರಲಿ…..!

ಮಳೆಗಾಲ ಬಂತೆಂದರೆ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಕೆಲವೊಮ್ಮೆ ಅದಕ್ಕಿಂತ ಅಪಾಯಕಾರಿ ಅತಿಥಿ ಮನೆಯೊಳಗೆ, ಬೈಕೊಳಗೆ, ಕಾರಿನೊಳಗೆ ಹೀಗೆ ಎಲ್ಲೆಂದರಲ್ಲಿ ಬಂದು ಭೀತಿ ಹುಟ್ಟಿಸಬಹುದು. ಅಷ್ಟಕ್ಕೂ ಯಾರು ಈ ಅತಿಥಿ ಅಂತೀರಾ ಹೇಳ್ತೀವಿ ಕೇಳಿ…. ಮಳೆಗಾಲದ ಪ್ರಮುಖ ಅತಿಥಿ ಈ ಹಾವುಗಳು, ಹೌದು, ಮಳೆಯನ್ನು ತಪ್ಪಿಸಲು, ಬಿಸಿ ವಾತಾವರಣವನ್ನು ಅರಸಿಕೊಂಡು ಎಲ್ಲೆಂದರಲ್ಲಿ ನುಗ್ಗಿ ಜನರ ಪ್ರಾಣಕ್ಕೆ ಕಂಟಕ ತರಬಹುದು. ಈ ಹಾವುಗಳಲ್ಲಿ ಕೆಲವೊಂದು ವಿಷವಿಲ್ಲದ ಹಾವುಗಳಿದ್ದರೆ, ಇನ್ನು ಕೆಲವು ವಿಷವಿರುವ ಹಾವುಗಳೂ ಇರುತ್ತವೆ. ಈ ಕಾರಣಕ್ಕಾಗಿಯೇ ಮಳೆಗಾಲದ ಸಮಯದಲ್ಲಿ ಯಾವ ರೀತಿ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಸುಬ್ಬಂದಿಗಳಿಗೆ ಕೆಲಸವಿರುತ್ತೋ, ಅದೇ ರೀತಿಯ ಕೆಲಸ ಉರಗತಜ್ಞರಿಗೂ ಇರುತ್ತದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕೆಲವು ಕಡೆ ಕಾಡು, ಕೆಲವು ಕಡೆ ತೋಟ ಹಾಗು ಇನ್ನು ಕೆಲವು ಕಡೆ ನಗರ ಪ್ರದೇಶವನ್ನು ಹೊಂದಿರುವ ಪ್ರದೇಶ. ಕೃಷಿತೋಟ ಮತ್ತು ಕಾಡಿನಂಚಿನಲ್ಲಿರುವ ಮನೆಗಳಿಗೆ ಹಾವುಗಳು ಮಳೆಗಾಲದಲ್ಲಿ ಬರೋದು ಸಾಮಾನ್ಯವಾಗಿದ್ದು, ಇತ್ತೀಚೆಗೆ ದಿನಗಳಲ್ಲಿ ನಗರದ ಮಧ್ಯೆಯೂ ಈ ಹಾವುಗಳ ಸಮಸ್ಯೆ ಕಂಡು ಬರುತ್ತಿದೆ. ಪುತ್ತೂರಿನ ಜಿ.ಎಲ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಬೈಕ್ ಒಂದಕ್ಕೆ ನಾಗರಹಾವಿನ ಮರಿಯೊಂದು ನುಗ್ಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಜನ ಎಷ್ಟೇ ಪ್ರಯತ್ನ ಪಟ್ಟರೂ ಹಾವಿನ ಮರಿಯನ್ನು ಬೈಕ್ ನಿಂದ ಹೊರಗಡೆ ಓಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಾಗರಹಾವಿನ ಮರಿಯನ್ನು ಹುಡುಕಾಡಿದ ತೇಜಸ್ ಗೆ ಹಾವು ಬೈಕ್ ನ ಹೆಡ್ ಲೈಟ್ ಪಕ್ಕದಲ್ಲಿ ಬೆಚ್ಚನೆ ಕುಳಿತಿರೋದು ಪತ್ತೆಯಾಗಿದೆ. ಆ ವೇಳೆಗಾಗಲೇ ಬೈಕ್‌ನ ಎಲ್ಲಾ ಪಾರ್ಟ್ಗಳನ್ನು ಬಿಡಿಸಿ, ಕೇವಲ ಬೈಕ್ ಅಸ್ತಿಪಂಜರ ಮಾತ್ರ ಕಾಣುವ ಹಂತಕ್ಕೆ ತಲುಪಿತ್ತು.


ಬೈಕ್‌ನಿಂದ ನಾಗರಹಾವಿನ ಮರಿಯನ್ನು ತೆಗೆದ ತಕ್ಷಣವೇ ಮನೆಯೊಂದರ ಬೆಡ್ ರೂಂ ಗೆ ನಾಗರಹಾವು ನುಗ್ಗಿದ ಬಗ್ಗೆ ಕರೆ ಬಂದಿದೆ. ಹಾವಿನ ಮರಿಯನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ, ಕರೆ ಬಂದ ಮನೆಗೆ ತೆರಳಿ, ಅಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಮಳೆಗಾಲದ ಸಮಯದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಹೋಗೋದು ಸಾಮಾನ್ಯ. ಈ ಸಂದರ್ಭದಲ್ಲಿ ಜನರು ಗಾಬರಿಪಡದೆ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕು ಎಂದು ತೇಜಸ್ ಬನ್ನೂರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!