ಮಳೆಗಾಲ ಬಂತೆಂದರೆ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಕೆಲವೊಮ್ಮೆ ಅದಕ್ಕಿಂತ ಅಪಾಯಕಾರಿ ಅತಿಥಿ ಮನೆಯೊಳಗೆ, ಬೈಕೊಳಗೆ, ಕಾರಿನೊಳಗೆ ಹೀಗೆ ಎಲ್ಲೆಂದರಲ್ಲಿ ಬಂದು ಭೀತಿ ಹುಟ್ಟಿಸಬಹುದು. ಅಷ್ಟಕ್ಕೂ ಯಾರು ಈ ಅತಿಥಿ ಅಂತೀರಾ ಹೇಳ್ತೀವಿ ಕೇಳಿ…. ಮಳೆಗಾಲದ ಪ್ರಮುಖ ಅತಿಥಿ ಈ ಹಾವುಗಳು, ಹೌದು, ಮಳೆಯನ್ನು ತಪ್ಪಿಸಲು, ಬಿಸಿ ವಾತಾವರಣವನ್ನು ಅರಸಿಕೊಂಡು ಎಲ್ಲೆಂದರಲ್ಲಿ ನುಗ್ಗಿ ಜನರ ಪ್ರಾಣಕ್ಕೆ ಕಂಟಕ ತರಬಹುದು. ಈ ಹಾವುಗಳಲ್ಲಿ ಕೆಲವೊಂದು ವಿಷವಿಲ್ಲದ ಹಾವುಗಳಿದ್ದರೆ, ಇನ್ನು ಕೆಲವು ವಿಷವಿರುವ ಹಾವುಗಳೂ ಇರುತ್ತವೆ. ಈ ಕಾರಣಕ್ಕಾಗಿಯೇ ಮಳೆಗಾಲದ ಸಮಯದಲ್ಲಿ ಯಾವ ರೀತಿ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಸುಬ್ಬಂದಿಗಳಿಗೆ ಕೆಲಸವಿರುತ್ತೋ, ಅದೇ ರೀತಿಯ ಕೆಲಸ ಉರಗತಜ್ಞರಿಗೂ ಇರುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕೆಲವು ಕಡೆ ಕಾಡು, ಕೆಲವು ಕಡೆ ತೋಟ ಹಾಗು ಇನ್ನು ಕೆಲವು ಕಡೆ ನಗರ ಪ್ರದೇಶವನ್ನು ಹೊಂದಿರುವ ಪ್ರದೇಶ. ಕೃಷಿತೋಟ ಮತ್ತು ಕಾಡಿನಂಚಿನಲ್ಲಿರುವ ಮನೆಗಳಿಗೆ ಹಾವುಗಳು ಮಳೆಗಾಲದಲ್ಲಿ ಬರೋದು ಸಾಮಾನ್ಯವಾಗಿದ್ದು, ಇತ್ತೀಚೆಗೆ ದಿನಗಳಲ್ಲಿ ನಗರದ ಮಧ್ಯೆಯೂ ಈ ಹಾವುಗಳ ಸಮಸ್ಯೆ ಕಂಡು ಬರುತ್ತಿದೆ. ಪುತ್ತೂರಿನ ಜಿ.ಎಲ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಬೈಕ್ ಒಂದಕ್ಕೆ ನಾಗರಹಾವಿನ ಮರಿಯೊಂದು ನುಗ್ಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಜನ ಎಷ್ಟೇ ಪ್ರಯತ್ನ ಪಟ್ಟರೂ ಹಾವಿನ ಮರಿಯನ್ನು ಬೈಕ್ ನಿಂದ ಹೊರಗಡೆ ಓಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಾಗರಹಾವಿನ ಮರಿಯನ್ನು ಹುಡುಕಾಡಿದ ತೇಜಸ್ ಗೆ ಹಾವು ಬೈಕ್ ನ ಹೆಡ್ ಲೈಟ್ ಪಕ್ಕದಲ್ಲಿ ಬೆಚ್ಚನೆ ಕುಳಿತಿರೋದು ಪತ್ತೆಯಾಗಿದೆ. ಆ ವೇಳೆಗಾಗಲೇ ಬೈಕ್‌ನ ಎಲ್ಲಾ ಪಾರ್ಟ್ಗಳನ್ನು ಬಿಡಿಸಿ, ಕೇವಲ ಬೈಕ್ ಅಸ್ತಿಪಂಜರ ಮಾತ್ರ ಕಾಣುವ ಹಂತಕ್ಕೆ ತಲುಪಿತ್ತು.
ಬೈಕ್‌ನಿಂದ ನಾಗರಹಾವಿನ ಮರಿಯನ್ನು ತೆಗೆದ ತಕ್ಷಣವೇ ಮನೆಯೊಂದರ ಬೆಡ್ ರೂಂ ಗೆ ನಾಗರಹಾವು ನುಗ್ಗಿದ ಬಗ್ಗೆ ಕರೆ ಬಂದಿದೆ. ಹಾವಿನ ಮರಿಯನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ, ಕರೆ ಬಂದ ಮನೆಗೆ ತೆರಳಿ, ಅಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಮಳೆಗಾಲದ ಸಮಯದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಹೋಗೋದು ಸಾಮಾನ್ಯ. ಈ ಸಂದರ್ಭದಲ್ಲಿ ಜನರು ಗಾಬರಿಪಡದೆ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕು ಎಂದು ತೇಜಸ್ ಬನ್ನೂರು ಮನವಿ ಮಾಡಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…