ನಿಮ್ಮಲ್ಲಿ ಅನೇಕರಿಗೆ ಸಪೋಟದ ಬಗ್ಗೆ ತಿಳಿದಿಲ್ಲದಿರಬಹುದು ಆದರೆ “ಚಿಕ್ಕು” ಬಗ್ಗೆ ತಿಳಿದಿರಲೇಬೇಕು ಸಪೋಟಾದ ಇನ್ನೊಂದು ಹೆಸರು ಚಿಕ್ಕು. ಸಪೋಟಾ ಮಾವಿನ ಹಣ್ಣಿನಂತಹ ಹಣ್ಣುಗಳ ವರ್ಗಕ್ಕೆ ಸೇರಿದ ರುಚಿಕರವಾದ ಕ್ಯಾಲೋರಿ ಭರಿತ ಹಣ್ಣು. ಈ ಹಣ್ಣನ್ನು ಭಾರತದಲ್ಲಿ ಚಿಕ್ಕು ಎಂದು ಕರೆಯಲಾಗುತ್ತದೆ.
ಸಪೋಟಾ ಅಥವಾ ಚಿಕ್ಕು ಕಂದು ಬಣ್ಣದ ಚರ್ಮವನ್ನು ಹೊಂದಿರುವ ಅಂಡಾಕಾರದ ಅಥವಾ ದುಂಡಗಿನ ಆಕಾರದ ಹಣ್ಣು. ಬಲಿಯದ ಹಣ್ಣುಗಳು ಗಟ್ಟಿಯಾದ ಮೇಲ್ಮೈ ಮತ್ತು ಬಿಳಿ ತಿರುಳನ್ನು ಹೊಂದಿದ್ದು, ಲ್ಯಾಟೆಕ್ಸ್ನ ಹೆಚ್ಚಿನ ಅಂಶದಿಂದ ಕೂಡಿದೆ. ಹಣ್ಣು ಹಣ್ಣಾಗುತ್ತಿದ್ದಂತೆ ಲ್ಯಾಟೆಕ್ಸ್ ಅಂಶವು ಕಡಿಮೆಯಾಗುತ್ತದೆ ಮತ್ತು ಅದರ ತಿರುಳು ಕಂದು ಬಣ್ಣವನ್ನು ಪಡೆಯುತ್ತದೆ. ತಿರುಳಿನ ಮಧ್ಯದಲ್ಲಿ ಹೊಳೆಯುವ ಕಪ್ಪು ಬೀಜಗಳನ್ನು ಹೊಂದಿರುತ್ತದೆ.
ಸಪೋಟ ಹಣ್ಣಿನ ಆರೋಗ್ಯಕರ ಉಪಯೋಗಗಳು:
ಹೊಟ್ಟೆಯ ಆರೋಗ್ಯ ವೃದ್ಧಿಸುತ್ತದೆ
ಸಪೋಟ ಹಣ್ಣಿನಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಪೆನಾಲ್ ಇದ್ದು, ಹೊಟ್ಟೆಯಲ್ಲಿ ಇದು ಆಮ್ಲದ ಸ್ರವಿಸುವಿಕೆಯನ್ನು ತಟಸ್ಥಗೊಳಿಸುವುದು. ಪರಾವಲಂಬಿ ವಿರೋಧಿ, ವೈರಲ್ ವಿರೋಧಿ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ಸಪೋತ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆಗೆ ಶಮನ ನೀಡುವುದು. ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು. ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು.
ಕ್ಯಾನ್ಸರ್ ತಡೆಯುವುದು
ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಸಪೋತ ಹಣ್ಣು ವಿವಿಧ ರೀತಿಯ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡವುದು. ವಿಟಮಿನ್ ಎ ಮತ್ತು ಬಿ ಲೋಳೆಯ ಒಳಪದರವನ್ನು ಆರೋಗ್ಯವಾಗಿಡುವುದು ಮತ್ತು ಇದರಿಂದ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುವುದು.
ರಕ್ತದೊತ್ತಡ ನಿಯಂತ್ರಣ
ಅಧಿಕ ರಕ್ತದತೊತಡ ನಿಯಂತ್ರಣದಲ್ಲಿ ಇಡಲು ಸಪೋಟ ಹಣ್ಣು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ಸೋಡಿಯಂ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತ ಸಂಚಾರನ್ನು ಸುಧಾರಿಸುವುದು ಮತ್ತು ರಕ್ತದೊತ್ತಡವನ್ನು ಇದು ನಿಯಂತ್ರಿಸುವುದು.
ಮೂಳೆಗಳ ಆರೋಗ್ಯ
ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಸುಂದರ ತ್ವಚೆ
ಸಪೋಟ ಹಣ್ಣು ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಎ, ಸಿ, ಇ ಮತ್ತು ಕೆ ಚರ್ಮವನ್ನು ಹೈಡ್ರೇಟ್ ಆಗಿಡುವುದು ಮತ್ತು ಚರ್ಮದ ಅಂಗಾಂಶ ಗಳನ್ನು ಪುನರ್ಶ್ಚೇತನಗೊಳಿಸುವುದು.



