ಹೆತ್ತ ತಂದೆಯೇ 25 ವರ್ಷದ ಮಗಳನ್ನು ಗುಂಡಿಕ್ಕಿ ಜೀವ ತೆಗೆದ ಘಟನೆ ಹರಿಯಾಣದ ಗುರುಗ್ರಾಮ್ ಸೆಕ್ಟರ್ 75 ರಲ್ಲಿ ನಡೆದಿದೆ.

ರಾಧಿಕ ಯಾದವ್ ತಂದೆಯಿಂದ ಜೀವ ಕಳೆದುಕೊಂಡ ಹೆಣ್ಮಗಳು. ಈಕೆ ನ್ಯಾಷನಲ್ ಲೇವೆಲ್‌ನ ಟೆನ್ನಿಸ್ ಆಟಗಾರ್ತಿ ಆಗಿದ್ದರು. ದೀಪಕ್ ಯಾದವ್ ಮಗಳ ಜೀವ ತೆಗೆದ ಆರೋಪಿ ಅಪ್ಪ. ಪೊಲೀಸರಿಗೆ ಆರೋಪಿ ತಪ್ಪೊಪ್ಪಿಗೆ ನೀಡಿದ್ದಾನೆ. ಅದರಲ್ಲಿ ಮಗಳ ಆದಾಯ ಹಾಗೂ ಆಕೆಯ ಕ್ಯಾರೆಕ್ಟರ್ ಬಗ್ಗೆ ಸ್ಥಳೀಯರು ನಿಂದಿಸುತ್ತಿದ್ದರು. ಅಲ್ಲದೇ ಮಗಳ ಆದಾಯದಿಂದ ನಾನು ಜೀವನ ಸಾಗಿಸುತ್ತಿದ್ದೇನೆ ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ಅವಮಾನಕ್ಕೆ ಒಳಗಾಗಿ ಇಂಥ ಕೆಲಸ ಮಾಡಿದೆ. ನಾನು ಹಲವು ಬಾರಿ ಟೆನ್ನಿಸ್ ಅಖಾಡಮಿಗೆ ಹೋಗದ ಹಾಗೆ ಕೇಳಿಕೊಂಡಿದ್ದೆ. ಅದಕ್ಕೆ ಆಕೆ ಒಪ್ಪಿರಲಿಲ್ಲ ಇದೇ ಕೋಪದಲ್ಲಿ ಗುಂಡು ಹಾರಿಸಿದ್ದಾನೆ. ಅಲ್ಲದೇ ಕೌಟುಂಬಿಕ ಕಲಹ ಕೂಡ ಇತ್ತು ಎಂದು ದಾಖಲಾಗಿದೆ.



