ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿ ಗುಡಿ ಕ್ಷೇತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ.

ಕ್ಷೇತ್ರದ ವಿಶೇಷ ಸೇವೆಯಾದ ನವದುರ್ಗಾ ಲೇಖನ ಯಜ್ಞವನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಮಗಳ ಜೊತೆ ಆಗಮಿಸಿದ ಆಶ್ವಿನಿಯವರು ಮಾಧ್ಯಮಗಳ ಜೊತೆ ಮಾತನಾಡಿ, ದೇವಿಯ ಮುಖ ಒಮ್ಮೆ ನೋಡಿದ್ರೆ ಮನಸ್ಸಲ್ಲಿ ಶಾಶ್ವತವಾಗಿ ಉಳಿಯತ್ತೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.



