ಗುರುಪೂರ್ಣಿಮೆಯ ಪ್ರಯುಕ್ತ ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮಾ ಸಂಭ್ರಮ 2025 ನಡೆಯಿತು.

ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ಕಾರ್ಯಕ್ರಮದ ನೇತೃತ್ವ ವಹಿಸಿದ್ರು. ಭಜನಾ ಕಾರ್ಯಕ್ರಮ, ಗುರುಪ್ರಾರ್ಥನೆ, ಸತ್ಸಂಗದ ನಂತರ ಅಕಾಲಿಕ ಮರಣ ಹೊಂದಿದ ನಿಸ್ವಾರ್ಥ ಮತ್ತು ಸೇವಾ ಮನೋಭಾವದ ಕ್ರಿಯಾಶೀಲಾ ಸ್ವಯಂ ಸೇವಕರಾದ ಗೀತಾ ಆಚಾರ್ಯ ನಾಯ್ಕನಕಟ್ಟೆ ಇವರ ಆತ್ಮ ಸದ್ಗತಿಗಾಗಿ ಮೌನ ಪ್ರಾರ್ಥನೆ ಅರ್ಪಿಸಲಾಯಿತು. ಗುರುಪೂರ್ಣಿಮೆ ವಿಶೇಷದ ಬಗ್ಗೆ ಆಚಾರ್ಯರು ಉಪನ್ಯಾಸ ನೀಡಿದ್ದಾರೆ. ನಂತರ ಗುರುಪೂಜೆ, ಶ್ರೀ ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಪಂಚಾಮೃತ ಅಭಿಷೇಕ ಸಹಿತ ಶೋಡಷೋಪಚಾರ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದಿವೆ.

ಕೊನೆಯಲ್ಲಿ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಪೂಜೆ ಮತ್ತು ಪ್ರಸಾದ ವೆಚ್ಚಗಳನ್ನು ಪಾಂಡುರಂಗ ಅಂಗಡಿಮನೆ ಗಿರಿಜಾ ನಾರಾಯಣ ತಾರಪತಿ ಭರಿಸಿದ್ದಾರೆ. ಮಾಲೀಕರಾದ ರತ್ನಾಕರ ಉಡುಪರು ಕಾರ್ಯಕ್ರಮ ನಡೆಸಲು ಉಚಿತವಾಗಿ ಸಭಾಂಗಣ ನೀಡಿದ್ದು, 200ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.



