ರಾಜ್ಯ ಪೋಲಿಸ್ ಇಲಾಖೆ ವತಿಯಿಂದ ಅಪರಾಧ ತಡೆಗಟ್ಟಲು ಮನೆ ಮನೆಗೆ ಪೋಲಿಸ್ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಅಜ್ಜರಕಾಡು ವಾರ್ಡಿನಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ತಮ್ಮ ಮನೆಯ ಮುಂದೆ ಚಾಲನೆ ನೀಡಿದ್ರು. ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿಗಳಾದ ಸುಧಾಕರ್ ನಾಯ್ಕ್, ಪಿಎ ಹೆಗಡೆ, ಡಿವೈಎಸ್ಪಿ ಡಿಟಿ ಪ್ರಭು, ಉಡುಪಿ ನಗರ ಪಿಐ ಮಂಜುನಾಥ್ ಬಡಿಗೇರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ರು.



