ಆರ್‌ಎಸ್‌ಎಸ್ ನಿಷೇಧ ದಿನಕ್ಕೊಂದು ರೂಪ ಪಡೆಯುತ್ತಿದೆ. ನೆಹರೂ ಅವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್‌ಎಸ್‌ಎಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದ್ರು. ಅಂಬೇಡ್ಕರ್ ಅವರೇ ಅಸ್ಪೃಶ್ಯತೆ-ಜಾತೀಯತೆ ಇಲ್ಲದ ಸಂಘಟನೆ ಎಂದು ಮೆಚ್ಚುಗೆಯನ್ನು ಅಂದು ವ್ಯಕ್ತಪಡಿಸಿದ್ರು ಎಂದು ಸಂಸದ ಕೊಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇವರು ಉಡುಪಿಯಲ್ಲಿ ಮಾತನಾಡಿ, ಆರ್ ಎಸ್ ಎಸ್ ನಿಷೇಧಕ್ಕೆ ಸ್ವತಃ ನೆಹರೂ ಅವರೇ ಒಮ್ಮೆ ಪ್ರಯತ್ನ ಮಾಡಿದ್ರು. ಪ್ರಯತ್ನ ಕೈಗೂಡದೇ ಇದ್ದಾಗ ನೆಹರೂ ಅವರೇ ಸ್ವಾಗತಿಸಿದ್ರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಯತ್ನ ಕೂಡ ಫಲಿಸಲಿಲ್ಲ. ರಾಹುಲ್ ಗಾಂಧಿ ಅದೇ ಮಾತನ್ನ ಆಡಿದ್ದಾರೆ. ಇಂತಹ ಗೊಂದಲಗಳಿಗೆ ಸಮಯ ವ್ಯರ್ಥ ಮಾಡಬೇಡಿ. ತಮ್ಮ ಇಲಾಖೆ ಅಭಿವೃದ್ಧಿ, ಬಡವರ ಕಲ್ಯಾಣದ ಕಡೆಗೆ ಗಮನ ಹರಿಸಲಿ ಎಂದು ಟಾಂಗ್ ಕೊಟ್ಟಿದ್ದಾರೆ.



