ಉರುಳಿಗೆ ಬಿದ್ದು ಚಿರತೆ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದಾಜು ಐದರಿಂದ ಆರು ವರ್ಷದ ಚಿರತೆಯಿರಬಹುದೆಂದು ಅಂದಾಜಿಸಲಾಗಿದೆ. ಕಾಡುಹಂದಿ ಬೇÃಟೆಗೆ ಬೇಟೆಗಾರರು ಉರುಳು ಕಟ್ಟಿದ್ರು. ಆಹಾರ ಅರಸಿ ಬಂದಿದ್ದ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



