ಜನ ಮನದ ನಾಡಿ ಮಿಡಿತ

ಹಾಸನ ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ನಡು ರಸ್ತೆಯಲ್ಲಿ ಯುವಕನೊಬ್ಬನ ಮೇಲೆ ನಾಲ್ವರು ಪುಂಡರು ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಹಾಸನ ನಗರದ ಕೆ.ಆರ್ ಪುರಂ ಬಡವಣೆಯ 16ನೇ ಅಡ್ಡ ರಸ್ತೆಯಲ್ಲಿ ಘಟನೆ ನಡೆದಿದ್ದು, ನಾಲ್ವರು ಪುಂಡರು ಯುವಕನೋರ್ವನ ಮೇಲೆ ಬ್ಯಾಟ್ ಬೀಸಿ ಅಟ್ಯಾಕ್ ಮಾಡಿದ್ದಾರೆ. ಹಾಡು ಹಗಲೇ ಜನ ನಿಭಿಡ ಪ್ರದೇಶದಲ್ಲಿಯೇ ಪುಂಡರ ಹಾವಳಿಗೆ ಹಾಸನದ ಜನತೆ ಬೆಚ್ಚಿಬಿದ್ದಿದ್ದು, ಪುಂಡರ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!