ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಮಂಗಳೂರಿನ ಹೆಸರಾಂತ ಸಂಸ್ಥೆ ರೋಹನ್ ಕಾರ್ಪೋರೇಷನ್‌ಗೆ ಬಾಲಿವುಡ್ ಸ್ಟಾರ್ ಶಾರುಖ್‌ಖಾನ್ ಬ್ರಾಂಡ್ ಅಂಬಾಸಿಡರ್

ಮಂಗಳೂರಿನ ಹೆಸರಾಂತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೋರೇಷನ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನೇಮಕಗೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ತಮ್ಮ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುವರು ಎಂದು ಘೋಷಿಸಿದ ರೋಹನ್ ಕಾರ್ಪೋರೇಷನ್ ಮುಖ್ಯಸ್ಥ ಡಾ. ರೋಹನ್ ಮೊಂತೆರೋ ಕರ್ನಾಟಕದಲ್ಲಿ ಶಾರುಖ್ ಖಾನ್ ಅವರು ಬ್ರಾಂಡ್ ಅಂಬಾಸಿಡರ್ ಆಗಿರುವುದು ಇದೇ ಪ್ರಥಮ ಎಂದ್ರು.

ಇದರಿಂದಾಗಿ ನಮ್ಮ ಸಂಸ್ಥೆಯ ಮೂವತ್ತೆರಡು ವರ್ಷದ ಪಯಣಕ್ಕೆ ಇನ್ನಷ್ಟು ಉತ್ತೇಜನ ಬಂದಿದೆ. ಗುಣಮಟ್ಟ, ಶ್ರೇಷ್ಠತ್ವದ ಜೊತೆ ಗ್ಲಾಮರ್ ಕೈಜೋಡಿಸಿದಂತಾಗಿದೆ ಎಂದಿದ್ದಾರೆ. ಸಮಾರಂಭದಲ್ಲಿ ರೋಹನ್ ಕಾರ್ಪೋರೇಷನ್ ಸಂಸ್ಥೆಯ ಬೆಳವಣಿಗೆಯ ಪ್ರಯಾಣ ಮತ್ತು ಶಾರುಖ್ ಖಾನ್ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ವೀಡಿಯೋವನ್ನು ಪ್ರದರ್ಶಿಸಲಾಯಿತು. ರೋಹನ್ ಕಾರ್ಪೋರೇಷನ್ ಸಂಸ್ಥೆ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಜಾಗತಿಕ ಗುಣಮಟ್ಟದ ವಸತಿ ಹಾಗು ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸುತ್ತಿದೆ. ಇದುವರೆಗೆ ಐದು ಸಾವಿರಕ್ಕೂ ಅಧಿಕ ಸಂತೃಪ್ತ ಗ್ರಾಹಕ ಬಳಗಕ್ಕೆ ನೆಮ್ಮದಿಯ ವಸತಿಯನ್ನು ಒದಗಿಸಿಕೊಟ್ಟಿದೆ. ಮೂರು ದಶಕಗಳಲ್ಲಿ ಮಂಗಳೂರಿನಲ್ಲಿ ತನ್ನದೇ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ವಿಶ್ವಾಸದ ಪ್ರತೀಕವಾಗಿ ಅದರ ನಿರ್ಮಾಣಗಳು ಮಂಗಳೂರಿನ ಹೆಮ್ಮೆಯ ಹೆಗ್ಗುರುತುಗಳಾಗಿ ಕಂಗೊಳಿಸುತ್ತಿವೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!