ಸಾಲೆತ್ತೂರು ಶಿವಗಿರಿ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಬಳಿಕ ಆಶೀವರ್ಚನ ನೀಡಿ, ನಮ್ಮ ಅಂತರಂಗದಲ್ಲಿ ದೇವರು ಇರುವುದನ್ನು ಅರಿತುಕೊಂಡರೆ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ. ದೇಗುಲದ ಜೀಣೋದ್ಧಾರಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಗ್ರಾಮದ ದೇವಳದ ಜೀಣೋದ್ಧಾರ ಕಾರ್ಯ ಭಕ್ತರಿಗೆ ಲಭಿಸಿದ ಪುಣ್ಯವಕಾಶ.
ದೇವಸ್ಥಾನ ಜೀಣೋದ್ಧಾರ ಪ್ರಕ್ರಿಯೆಗೆ ದ್ವಾರ ಶಿಲಾನ್ಯಾಸ ನಡೆಸಿದ್ದು ಕೂಡಾ ಶುಭ ಸೂಚನೆಯೇ ಆಗಿದೆ ಎಂದಿದ್ದಾರೆ. ಪ್ರಧಾನ ಅರ್ಚಕರಾದ ಭಾರ್ಗವ ಉಡುಪರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದಿದೆ. ಇನ್ನು ಸಂದರ್ಭದಲ್ಲಿ ಕ್ಷೇತ್ರ ತಂತ್ರಸ್ಥಾನದ ಮುಖ್ಯಸ್ಥರಾದ ಶ್ರೀನಿವಾಸ ಆಚಾರ್ ಮಂಕುಡೆ, ಮಂಗಳೂರು ಮನಪಾದ ವಲಯ ಆಯುಕ್ತರಾದ ರೇಖಾ ಜೆ ಶೆಟ್ಟಿ, ಶೀನಪ್ಪ ಆಳ್ವ ಕೊಲ್ಲಾಡಿ, ಚಿತ್ತರಂಜನ್ ಕರೈ, ಕೃಷಿಕರಾದ ಗೋಪಣ್ಣ ರೈ ಅಗರಿ, ಶ್ರೀಧರ ಪೂಜಾರಿ ಮಾವೆ, ಸದಾಶಿವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಸ್ ರವಿ ಕುಮಾರ್ ಬಳ್ಳಕ್ಕುರಾಯ, ಕೋಶಾಧಿಕಾರಿ ಮಂಜುನಾಥ ರೈ ಅಗರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿರೀಶ್ ಭಂಡಾರಿ ಕುಳಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಈ ಪುಣ್ಯಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಊರ ಪರವೂರ ಭಕ್ತಾದಿಗಳು ಭಾಗಿಯಾಗಿದ್ದಾರೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…