ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಾಲ್ವರು ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ತಪ್ಪಿಸಲು ಯತ್ನಿಸಿದ ಪ್ರಮುಖ ಆರೋಪಿ ಡ್ಯಾನಿಶ್‌ಗೆ ಪೊಲೀಸರು ಲಾಠಿ ರುಚಿ ತೋರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಬೀದಾ ಎಂಬಾಕೆಯು ತನ್ನ ಸಂಬಂಧಿಯ ಜೊತೆಗಿದ್ದ ವೈಯಕ್ತಿಕ ಸೇಡನ್ನು ತೀರಿಸಿಕೊಳ್ಳಲು ತನ್ನ ಆಪ್ತ ಮೊಹಮ್ಮದ್ ಡ್ಯಾನೀಶ್‌ನ ಮೂಲಕ ಈ ಕೃತ್ಯಕ್ಕೆ ಮುಂದಾಗಿದ್ಲು. ತನ್ನ ಸಂಬಂಧಿಯ 8 ವರ್ಷದ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆರೋಪಿಗಳಾದ ಮೊಹಮ್ಮದ್ ಡ್ಯಾನಿಶ್, ಶಮಿ, ಮೌಸೀನ್ ಮೂಲಕ ಲೈಂಗಿಕ ದೌರ್ಜನ್ಯ ಮಾಡಿಸಿದ್ಲು. ಈ ಪ್ರಕರಣದಲ್ಲಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಮುಖ ಆರೋಪಿ ಡ್ಯಾನಿಶ್‌ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಸಿಬಂದಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



