ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಮೌನೇಶ್ ಆಚಾರ್ಯ ಮಾಣಿ ಕಾಪಿಕಾಡು(42) ಇಂದು ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿ ಕಾಪಿಕಾಡಿನ ಮೌನೇಶ್ ಆಚಾರ್ಯ ಅವರು ರಂಗಭೂಮಿ ಕಲಾವಿದರೂ ಹೌದು.

ನೆಲ್ಯಾಡಿಯ ನಮ್ಮ ಕಲಾವಿದರು ತಂಡದಲ್ಲಿ ಕಲಾವಿದನಾಗಿ ಹಾಸ್ಯ, ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿರುವವರು. ಸಾಮಾಜಿಕ ಜಾಲತಾಣಗಳಲ್ಲೂ ಇವರ ಹಾಸ್ಯ ಅಭಿನಯ ಪ್ರಖ್ಯಾತಿಯನ್ನು ಪಡೆದಿದೆ. ಮೃತರು ಪತ್ನಿ, ಮಗು, ತಾಯಿ ಹಾಗೂ ತಮ್ಮನನ್ನು ಅಗಲಿದ್ದಾರೆ. ಮೃತರಿಗೆ ಹಲವಾರು ಕಲಾವಿದರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.



