ಹೃದಯಾಘಾತದಿಂದ ಸರ್ಕಾರಿ ನೌಕರ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದದಿದೆ.

ಹಾಸನ ಮೂಲದ 46ವರ್ಷದ ಸತೀಶ್ ಸಾವಿಗೀಡಾದ ದುರ್ದೈವಿ. ಲಾಯಿಲದ ಬಾಡಿಗೆ ಮನೆಯಲ್ಲಿ ಸ್ನಾನ ಮಾಡಿ ಬರುವಾಗ ಕುಸಿದು ಬಿದ್ದ ಸತೀಶ್ ಅವರನ್ನು, ಅವರ ಪತ್ನಿ ಜಯಶ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಸತೀಶ್ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಇನ್ನು ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಬೆಳ್ತಂಗಡಿಯ ಪ್ರಥಮ ದರ್ಜೆ ಸಹಾಯಕ ನೌಕರನಾಗಿ ಸತೀಶ್ ಕರ್ತವ್ಯ ನಿರ್ವಹಿಸುತ್ತಿದ್ರು.



