ಜನ ಮನದ ನಾಡಿ ಮಿಡಿತ

Advertisement

ಜೀವನದಲ್ಲಿ ಒಳ್ಳೆಯ ಆರಂಭದ ಜೊತೆ ಒಳ್ಳೆಯ ಅಂತ್ಯವು ಮುಖ್ಯ!!

ಆರಂಭ ಮತ್ತು ಅಂತ್ಯ, ಬಹುಷಃ ಈ ಎರಡು ಪದಗಳು ನಮಗೆಲ್ಲ ಹೊಸದೇನಲ್ಲ. ನಮ್ಮ ಬದುಕನ್ನೂ ಸೇರಿಸಿ ಪ್ರತಿಯೊಂದಕ್ಕೂ ಒಂದು ಆರಂಭ ಮತ್ತು ಒಂದು ಅಂತ್ಯ ಇದ್ದೇ ಇದೆ. ನಾವುಗಳು ನಮ್ಮ ಬದುಕಿನ ಸುಮಾರು ಕೆಲಸಗಳ ಆರಂಭಕ್ಕೆ ನೀಡುವ ಪ್ರಾಶಸ್ತ್ಯವನ್ನು ಆ ಕೆಲಸದ ಅಂತ್ಯಕ್ಕೆ ನೀಡುವುದರಲ್ಲಿ ಸೋತು ಬಿಡುತ್ತೇವೆ. ಒಂದು ಕೆಲಸವನ್ನು ಆರಂಭಿಸುವಾಗ ನಮ್ಮಲ್ಲಿರುವ ಉತ್ಸಾಹ ಸುಮಾರು ಬಾರಿ ಅದನ್ನು ಕೊನೆಗೊಳಿಸುವ ಹೊತ್ತಿಗೆ ನಮ್ಮಲ್ಲಿ ಇರುವುದೇ ಇಲ್ಲ. ಆರಂಭದಲ್ಲಿದ್ದ ಆಸಕ್ತಿ ಮತ್ತು ಉತ್ಸಾಹವನ್ನು ಕೊನೆಯವರೆಗೂ ಕಾಪಾಡಿಕೊಂಡು ಹಿಡಿದ ಕೆಲಸವನ್ನು ಒಳ್ಳೆಯ ರೀತಿಯಲ್ಲಿ ಮುಗಿಸಿದಾಗಲೇ ಪರಿಪೂರ್ಣತೆ ಸಾಧ್ಯ. ಒಂದು ಕೆಲಸವನ್ನು ಹೇಗೆ ಅಂತ್ಯಗೊಳಿಸಿದ್ದೇವೆ ಎಂಬುದು ನನ್ನ ಪ್ರಕಾರ ಹೇಗೆ ಆ ಕೆಲಸವನ್ನು ಆರಂಭಿಸಿದ್ದೇವೆ ಎಂಬುದಕ್ಕಿಂತಲೂ ಮುಖ್ಯ, ಉದಾಹರಣೆಗೆ ಒಂದು ಓಟದ ಸ್ಪರ್ಧೆಯಲ್ಲಿ ಪ್ರಾರಂಭ ನಿಧಾನವಾಗಿದ್ದರೂ ಅಂತ್ಯ ಚೆನ್ನಾಗಿದ್ದರೆ ಸ್ಪರ್ಧೆ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಗೆದ್ದವರ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದೆ ಇವೆ.

ಒಂದು ಕೆಲಸವನ್ನು ಹೇಗೆ ಆರಂಭಿಸಿದ್ದೇವೆ ಎಂದು ಗಮನಿಸುವವರ ಸಂಖ್ಯೆ ಬಹಳ ವಿರಳ. ಬದಲಾಗಿ ಆ ಕೆಲಸವನ್ನು ಹೇಗೆ ಮಾಡಿ ಮುಗಿಸಿದ್ದೇವೆ ಎಂಬುದರ ಮೇಲೆ ಜನ ನಮ್ಮ ಸಾಮರ್ಥ್ಯವನ್ನು ಸಾಮಾನ್ಯವಾಗಿ ಅಲೆಯುತ್ತಾರೆ. ಒಳ್ಳೆಯ ಅಂತ್ಯ ಜನರಲ್ಲಿ ನಮ್ಮ ಕುರಿತು ಒಳ್ಳೆಯ ಅಭಿಪ್ರಾಯಗಳನ್ನು ಹುಟ್ಟಿಸಬಹುದು. ಅದೇ ಒಂದು ನಿರಾಸ ಅಂತ್ಯ ಜನರಲ್ಲಿ ನಮ್ಮ ಬಗ್ಗೆ ಕೆಟ್ಟ ಆಕರ್ಷಣೆ ಹುಟ್ಟಲು ನಾಂದಿಯಾಗಬಹುದು. ಒಂದು ಕೆಲಸವನ್ನು ಹೇಗೆ ಪ್ರಾರಂಬಿಸುವುದು ಎಂಬ ವಿಚಾರದ ಕುರಿತು ಹತ್ತಾರು ಯೋಜನೆಗಳನ್ನು ರೂಪಿಸುವ ನಾವು ಆ ಕೆಲಸವನ್ನು ಸರಿಯಾಗಿ ಮುಗಿಸುವ ರೀತಿಯ ಬಗ್ಗೆ ಚಿಂತಿಸುವುದೇ ಇಲ್ಲ. ಒಂದು ಬರಹದ ಉದಾಹರಣೆಯನ್ನು ತೆಗೆದುಕೊಂಡರೂ ಅಷ್ಟೇ ಅಲ್ಲಿ ನಾವು ಆರಂಭದ ಸಾಲುಗಳಿಗೆ ತಲೆ ಓಡಿಸುವಷ್ಟು ಅಂತ್ಯದ ಸಾಲುಗಳಿಗೆ ಓಡಿಸುವುದಿಲ್ಲ. ಮೊದಲ ಪ್ಯಾರಾ ಬರೆದು ಬರಹದ ಮಧ್ಯಭಾಗಕ್ಕೆ ಬಂದು ನಿಂತಾಗ ಒಮ್ಮೆ ಬರೆದು ಮುಗಿಸಿದರೆ ಸಾಕು ಎಂಬ ಮೊಂಡುತನ ನಮ್ಮನ್ನಾಗಲೇ ಆವರಿಸಿಬಿಟ್ಟಿರುತ್ತದೆ. ಇಡೀ ಬರಹದ ಉದ್ದೇಶ ಮತ್ತು ಸಾರಾಂಶವನ್ನು ಅಂತ್ಯದಲ್ಲಿ ಚೆನ್ನಾಗಿ ದಾಖಲಿಸಿದರೆ ಮಾತ್ರ ಓದುಗನ ಮನಸ್ಸಿಗೆ ನಿಮ್ಮ ಬರಹ ನಾಟುವುದು. ಹೀಗೆ ಬರವಣಿಗೆಯಂತಹ ಸೂಕ್ಷ್ಮ ಕೆಲಸದಿಂದ ಹಿಡಿದು ಬದುಕಿನ ನಾನಾ ಕೆಲಸಗಳಲ್ಲಿ ಸರಿಯಾದ ಅಂತ್ಯ ಅನ್ನುವುದು ಬಹಳ ಮುಖ್ಯ.


ನಾವುಗಳು ಬದುಕಿನಲ್ಲಿ ಹೆಚ್ಚಿನ ಬಾರಿ ವಿದ್ಯಾರ್ಥಿಗಳು ಶಾಲೆಯಲ್ಲಿ ಪರೀಕ್ಷಾ ಉತ್ತರಗಳನ್ನು ಬರೆಯುವ ರೀತಿಯನ್ನೇ ಅನುಸರಿಸುತ್ತೇವೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಆರಂಭದ ಪುಟಗಳಲ್ಲಿ ಅಕ್ಷರ, ಉತ್ತರ ಎಲ್ಲವೂ ವ್ಯಾಕರಣಬದ್ದವಾಗಿ ಚೆನ್ನಾಗಿಯೇ ಇರುತ್ತದೆ. ಆದರೆ ಕಡೆಪುಟಕ್ಕೆ ಬಂದಾಗ ಅವಸರದಲ್ಲಿ ಅಕ್ಷರಗಳು ಅಂಕು ಡೊಂಕಾಗಿ ಉತ್ತರಗಳು ಕೂಡ ಲಯತಪ್ಪಿರುತ್ತದೆ. ನಾವುಗಳು ಕೂಡ ಅದೇ ರೀತಿ ಕೆಲಸದ ಆರಂಭದಲ್ಲಿ ದುಪ್ಪಟ್ಟು ಆಸಕ್ತಿ, ಉತ್ಸಾಹ ಎಲ್ಲವೂ ಇರುತ್ತದೆ. ಅದೇ ಕಡೆಕಡೆಗೆ ಆ ಕೆಲಸ ಒಮ್ಮೆ ಮುಗಿದ್ರೆ ಸಾಕಪ್ಪ ಅನ್ನುವ ನಿರಾಸಕ್ತಿಯಿಂದ ಆ ಕೆಲಸವನ್ನು ಪರಿಪೂರ್ಣವಾಗಿ ಮುಗಿಸುವುದರಲ್ಲಿ ಎಡವುತ್ತೇವೆ.


ಸಿನಿಮಾ ನಿರ್ದೇಶಕನೊಬ್ಬ ಚಿತ್ರದ ಆರಂಭಕ್ಕೆ ಕೊಡುವ ಪ್ರಾಶಸ್ತ್ಯವನ್ನು ಚಿತ್ರದ ಅಂತ್ಯಕ್ಕೆ ನೀಡದೇ ಹೋದರೆ ಆ ಚಿತ್ರ ಹೆಚ್ಚು ಜನರನ್ನು ತಲುಪುವುದಿಲ್ಲ. ಕಾರಣ ಪ್ರತಿಯೊಬ್ಬ ಸಿನಿ ಪ್ರೇಕ್ಷಕನ ಮನಸಲ್ಲಿ ಉಳಿಯುವುದು ಚಿತ್ರದ ಆ ಕಡೆಕ್ಷಣದ ದೃಶ್ಯಗಳೇ. ಒಂದು ಸಿನಿಮಾ ಹಿಟ್ ಆಗುವ ಸಂಧರ್ಭದಲ್ಲಿ “ಸಿನಿಮಾದ ಕ್ಲೈಮಾಕ್ಸ್ ಅಂತೂ ಸೂಪರ್” ಅನ್ನುವ ಮಾತುಗಳನ್ನು ಸುಮಾರು ಬಾರಿ ಪ್ರೇಕ್ಷಕರ ಬಾಯಿಂದ ನಾವು ಕೇಳುವುದು ಕೂಡ ಉಂಟು. ಹಾಗಾಗಿ ಕ್ಲೈಮಾಕ್ಸ್ ಚೆನ್ನಾಗಿದ್ದರೆ ಸಿನಿಮಾ ಗೆಲುವುದರಲ್ಲಿ ಎರಡು ಮಾತಿಲ್ಲ. ಈ ಕ್ಲೈಮಾಕ್ಸ್ ಥಿಯರಿ ನಮ್ಮ ಬದುಕಿಗೂ ಅನ್ವಯಿಸುತ್ತದೆ. ನಾವು ಎಲ್ಲಿ ಹೇಗೆ ಹುಟ್ಟಿ ನಮ್ಮ ಬದುಕನ್ನು ಆರಂಭಿಸಿದ್ದೇವೆ ಎಂಬುದಕ್ಕಿಂತಲೂ ಹೇಗೆ ಬದುಕಿ ಬದುಕನ್ನು ಕೊನೆಗೊಳಿಸುತ್ತೇವೆ ಎಂಬುದು ಹೆಚ್ಚು ಜನರ ಮನದಲ್ಲಿ ಉಳಿದುಹೋಗುತ್ತದೆ. ಹಾಗಾಗಿ ಬದುಕು ಅನ್ನುವ ಚಿತ್ರದ ಆರಂಭ ಮತ್ತು ಮಧ್ಯ0ತರ ಹೇಗೆ ಇದ್ದರೂ ಅಂತ್ಯ ಮಾತ್ರ ನೆಮ್ಮದಿ ಮತ್ತು ಸಾಧನೆಗಳ ಜೊತೆಯಾಗಲಿ.
ಯಾವ ಆಸಕ್ತಿಯಿಂದ ಒಂದು ಕೆಲಸವನ್ನು ಆರಂಭಿಸುತ್ತೇವೋ ಅದೇ ಆಸಕ್ತಿಯಲ್ಲಿ ಆ ಕೆಲಸವನ್ನು ಮುಗಿಸುವುದು ಅತಿಮುಖ್ಯ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ, “ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್” ಅಂತ, ಆದರೆ ನನ್ನ ಪ್ರಕಾರ “ಲಾಸ್ಟ್ ಇಂಪ್ರೆಷನ್ ಕ್ಯಾನ್ ಆಲ್ಸೋ ಬಿ ದಿ ಬೆಸ್ಟ್ ಇಂಪ್ರೆಷನ್”.ಹಾಗಾಗಿ ಆರಂಭ ಹೇಗೆ ಮುಖ್ಯವು ಬದುಕಿನ ನಾನಾ ಕೆಲಸಗಳಲ್ಲಿ ಅಂತ್ಯವೂ ಅಷ್ಟೇ ಮುಖ್ಯ.                                                                                                                                                                                                                                                                                                                                                           ಚೇತನ್ ಕಾಶಿಪಟ್ನ

Leave a Reply

Your email address will not be published. Required fields are marked *

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

error: Content is protected !!