ಡಿಜಿಟಲ್ ಸಂವಹನ ಜಗತ್ತನ್ನು ಆವರಿಸುವ ಮುನ್ನ ಪತ್ರಗಳ ಮೂಲಕ ದೂರದ ವ್ಯಕ್ತಿಯ ಜೊತೆ ಸಂವಹನ ಬೆಳೆಸುವ ಕ್ರಮ ಇತ್ತು. ವ್ಯಕ್ತಿಯೊಬ್ಬ ಖಾಲಿ ಹಾಳೆಯ ಮೇಲೆ ಗೀಚಿದ ವಿಷಯಗಳು ಗಂಭೀರವಾದದ್ದೋ, ಸಂತಸಮಯವಾದದ್ದೋ ಹೀಗೆ ಅದರ ಭಾವವನ್ನು ಓದುಗನೇ ಊಹಿಸಿ ಅರ್ಥೈಸಿಕೊಳ್ಳಬೇಕಿತ್ತು. ಆದರೀಗ ಕಾಲ ಬದಲಾಗಿದೆ, ಸುಮಾರು 90 ಶೇಕಡಾ ಜಗತ್ತನ್ನು ಡಿಜಿಟಲ್ ಸಂವಹನವೇ ಆವರಿಸಿಬಿಟ್ಟಿದೆ. ನಾವು ಯಾವ ಭಾವದಲ್ಲಿ ಒಂದು ಸಂದೇಶವನ್ನು ಕಳುಹಿಸಿದ್ದೇವೆ ಎಂಬುದು ಓದುಗನಿಗೆ ಸರಳವಾಗಿ ಅರ್ಥವಾಗಲು ಸಹಕರಿಸುವ ನೂರಾರು ಡಿಜಿಟಲ್ ಎಮೋಜಿಗಳು ಇಂದು ಚಾಲ್ತಿಯಲ್ಲಿವೆ. ನಮ್ಮ ಭಾವನೆಗಳ ಪ್ರತಿರೂಪದಂತಿರುವ ಈ ಎಮೋಜಿಗಳನ್ನು ಹೊರತುಪಡಿಸಿ ಡಿಜಿಟಲ್ ಸಂವಹನ ನಡೆಸುವುದು ಎಂದರೆ ಏನೋ ಅತೃಪ್ತ ಭಾವ ನಮ್ಮನ್ನು ಕಾಡುತ್ತದೆ. ವಾಟ್ಸಪ್, ಇನ್ಸ್ಟಾಗ್ರಾಮ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಂತೂ ಎಮೋಜಿಗಳ ಹಾವಳಿ ತುಸು ಹೆಚ್ಚಾಗೆ ನಮಗೆ ಕಾಣಸಿಗುತ್ತದೆ. ಅದರಲ್ಲೂ ಆತ್ಮೀಯರ ಜೊತೆ ಚಾಟಿಂಗ್ ಎಂದರೆ ಅಲ್ಲಿ ಪಠ್ಯ ಸಂದೇಶಗಳಿಗಿಂತ ಹೆಚ್ಚಾಗಿ ಎಮೋಜಿಗಳೇ ರಾರಾಜಿಸುತ್ತಿರುತ್ತವೆ.
ಅಳು, ನಗು, ಕೋಪ, ಮೌನ ಹೀಗೆ ನಮ್ಮ ಪ್ರತಿಯೊಂದು ಭಾವನೆಯನ್ನು ಬಿಂಬಿಸುವ ಎಮೋಜಿಗಳು ಇತ್ತೀಚೆಗೆ ಹೆಚ್ಚಾಗೆ ಬಳಕೆಯಲ್ಲಿವೆ. ಡಿಜಿಟಲ್ ಸಂವಹನವನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿಸುವಲ್ಲಿ ಈ ಎಮೋಜಿಗಳ ಪಾತ್ರ ಬಹಳಷ್ಟಿದೆ. ಪ್ರೀತಿಯ ಸಂಕೇತವಾಗಿ ಕೆಂಪು ಹೃದಯದ ಎಮೋಜಿಯನ್ನೋ, ಗೌರವದ ಪ್ರತೀಕವಾಗಿ ಹೂಗುಚ್ಛದ ಎಮೋಜಿಯನ್ನೋ ಕಳುಹಿಸುವುದು ಡಿಜಿಟಲ್ ಸಂವಹನದಲ್ಲಿ ಇತ್ತೀಚಿಗೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರಿಗೂ ಪ್ರತಿ ಎಮೋಜಿ ಏನನ್ನು ಸೂಚಿಸುತ್ತದೆ ಎಂಬುದು ಬಹುಬೇಗನೆ ಅರ್ಥವಾಗಿಬಿಡುತ್ತದೆ. ಎಮೋಜಿಗಳು ಜಗತ್ತನ್ನು ಎಷ್ಟು ಆವರಿಸಿದೆ ಎಂದರೆ ಇಂದು ವಾಟ್ಸಾಪ್ ಸ್ಟೇಟಸ್ ನಲ್ಲಿಯೇ ದೇವರ ವಿಡಿಯೋ ಹಾಕಿ ಒಂದು ಕೈ ಮುಗಿಯುವ ಮತ್ತು ತಲೆಬಾಗಿ ನಮಿಸುವ ಎಮೋಜಿ ಹಾಕಿಬಿಟ್ಟರೆ ದೇವರ ಭಕ್ತಿಯು ಮೊಬೈಲ್ ನಲ್ಲಿಯೇ ಮುಗಿದುಬಿಡುತ್ತದೆ. ಇಂದು ಮಳೆ ಬರುತ್ತಿದೆ ಎಂಬುದು ತಿಳಿಯಲು ಮನೆಯ ಹೊರಬಂದು ನೋಡಬೇಕೆಂದಿಲ್ಲ, ಮಳೆ ಶುರುವಾಗುವ ಹೊತ್ತಿಗೆ ನಮ್ಮ ಸಂಪರ್ಕದಲ್ಲಿರುವ ಯಾರದಾರೊಬ್ಬರು ಮಳೆಯ ಎಮೋಜಿಯನ್ನು ಸ್ಟೇಟಸ್ ಹಾಕಿರುತ್ತಾರೆ. ಅದನ್ನು ಕಂಡ ತಕ್ಷಣ ಹೊರಗಡೆ ಮಳೆ ಶುರುವಾಗಿರುವ ಬಗೆ ನಮಗೆ ಖಚಿತತೆ ಸಿಕ್ಕಿಬಿಡುತ್ತದೆ.
ಅಳುವ ಎಮೋಜಿಯನ್ನು ಯಾರಿಗಾದರೊಬ್ಬರಿಗೆ ಕಳುಹಿಸುವಾಗ ಅಸಲಿಗೆ ನಾವು ಅತ್ತೇ ಇರುವುದಿಲ್ಲ, ಅದೇ ರೀತಿ ನಗುವ ಎಮೋಜಿ ಕಳುಹಿಸುವಾಗ ಸುಮಾರು ಬಾರಿ ನಮ್ಮ ಮುಖದಲ್ಲಿ ನಗುವೇ ಇರುವುದಿಲ್ಲ. ಆದ್ದರಿಂದ ಅಳದೆಯೇ ಕಣ್ಣೀರು ಹಾಕಲು, ನಗದೆಯೇ ಹಲ್ಲು ಕಾಣಲು ಈ ಎಮೋಜಿಗಳಿಂದ ಇಂದು ಸಾಧ್ಯವಾಗಿದೆ ಎಂದರೆ ತಪ್ಪಾಗದು. ಅದೆಷ್ಟರ ಮಟ್ಟಿಗೆ ಎಮೋಜಿಗಳು ನಮ್ಮನ್ನು ಆವರಿಸಿದೆ ಎಂದರೆ ಎಮೋಜಿ ಸಹಿತವಾಗಿ ನಾವು ಕಳುಹಿಸಿದ ಗುಡ್ ಮಾರ್ನಿಂಗ್ ಎಂಬ ಸಂದೇಶಕ್ಕೆ ಒಂದು ವೇಳೆ ಎಮೋಜಿ ರಹಿತವಾಗಿ ಉತ್ತರ ಬಂದರಂತೂ ಇಡೀ ದಿನ ಅದರ ಬಗ್ಗೆಯೇ ಚಿಂತಿಸುವ ಪ್ರಸಂಗವೂ ಇದೆ. ಹೀಗೆ ಡಿಜಿಟಲ್ ಸಂವಹನ ಹೇಗೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆಯೋ ಅದರಲ್ಲಿ ಹುಟ್ಟಿಕೊಂಡಿರುವ ಎಮೋಜಿಗಳು ಕೂಡ ನಮ್ಮ ಭಾವನೆಗಳ ಪ್ರದರ್ಶನಕ್ಕೆ ಮುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜುಲೈ 17 ರ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ಆಚರಿಸಲಾಗುತ್ತದೆ. ಎಮೋಜಿಗಳನ್ನು ಸಂಭ್ರಮಿಸುವುದಕ್ಕೂ ಕೂಡ ಒಂದು ದಿನವಿದೆ ಎಂದರೆ ಅವುಗಳ ಪ್ರಭಾವ ಎಷ್ಟಿದೆ ಎಂಬುದು ಮನದಟ್ಟಾಗಲು ಹೆಚ್ಚು ಸಮಯ ಹಿಡಿಯುದಿಲ್ಲ. 2014 ರಲ್ಲಿ ಮೊದಲ ಬಾರಿಗೆ ಎಮೋಜಿಪೀಡಿಯ ಫೌಂಡರ್ ಜೇರೆಮಿ ಬರ್ಗ್ ಅವರು ಎಮೋಜಿ ದಿನದ ಆಚರಣೆಯನ್ನು ಜಾರಿಗೆ ತಂದರು. ಅಲ್ಲಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ಆಚರಿಸಲಾಗುತ್ತದೆ.
ಡಿಜಿಟಲ್ ಸಂವಹನದಲ್ಲಿ ಎಮೋಜಿಗಳ ಆವಿಷ್ಕಾರದಿಂದ ದೂರ ದೂರದ ಮನಸುಗಳ ನಡುವೆ ಭಾವನೆಗಳು ರವಾನೆಯಾಗಿದೆ. ಮಾತನಾಡದೆಯೇ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳು ಸಹಕರಿಸಿವೆ. ಸಪ್ಪೆಯಾಗಿದ್ದ ಡಿಜಿಟಲ್ ಸಂದೇಶಗಳಿಗೆ ಹೊಸ ಮೆರಗು ತಂದಿದೆ. ಎಮೋಜಿಗಳ ಪಾತ್ರ ಸಂವಹನ ಕ್ಷೇತ್ರದಲ್ಲಿ ಬಹಳ ವಿಶೇಷ ಮತ್ತು ವಿಶಾಲ ಎಂಬುದರಲ್ಲಿ ಅನುಮಾನವಿಲ್ಲ.
ಚೇತನ್ ಕಾಶಿಪಟ್ನ
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…