ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಸಮೀಪದ ನಡಕ್ಕಾಲ್‌ನಲ್ಲಿಯ ಮನೆ ಮೇಲೆ ಬಂಡೆ ಕುಸಿದು ಮನೆಗೆ ಹಾನಿಯಾಗಿದೆ.

ನಿತೇಶ್ ಎಂಬವರ ಮನೆಯ ಮೇಲೆ ಪಕ್ಕದ ಗುಡ್ಡದ ಮೇಲಿದ್ದ ಬಂಡೆ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದೆ. ಇದರಿಂದ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಬಂಡೆ ಕುಸಿಯುವ ಸಂದರ್ಭದಲ್ಲಿ ಮನೆಯಲ್ಲಿ ನಾಲ್ಕು ಜನರಿದ್ರು. ಶಬ್ದ ಕೇಳಿ ಅವರು ಹೊರಗೆ ಓಡಿ ಬಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



