ಮಂಗಳೂರು; ಶ್ರೀಮAತರು ಮತ್ತು ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡು ದೇಶಾದ್ಯಂತ ವಂಚನಾ ಜಾಲವನ್ನು ಹೊಂದಿದ್ದ ಮಂಗಳೂರಿನ ವಂಚಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಹತ್ತು ವರ್ಷಗಳಲ್ಲಿ ಈ ಆರೋಪಿ ರೋಹನ್ ಸಲ್ಡಾನಾ ಇನ್ನೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಎಸಗಿದ್ದಾನೆ ಎನ್ನಲಾಗುತ್ತಿದೆ.
ಮಂಗಳೂರಿನ ಸೆನ್ ಠಾಣೆಯಲ್ಲಿ ಇತ್ತೀಚೆಗೆ ಎರಡು ವಂಚನಾ ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಂಬAಧಿಸಿದAತೆ ತನಿಖೆ ನಡೆಸುತ್ತಿದ್ದ ಪೊಲೀಸರು ಗುರುವಾರ ರಾತ್ರಿ ಮಹತ್ವದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಪ್ಪಿನ ಮೊಗರು ಬಳಿಯ ತಂದೊಳಿಗೆ ಎಂಬಲ್ಲಿರುವ ತನ್ನ ಐಶಾರಾಮಿ ಮನೆಯಲ್ಲಿ ಇದ್ದಾಗಲೇ ಆರೋಪಿಯನ್ನು ಬಂಧಿಸಲಾಗಿದೆ.ಬAಧಿತ ದುಬಾಯ್ಸ್ ರೋಹನ್ ಸಲ್ಡಾನಾ ದೇಶದ ಪ್ರಮುಖ ನಗರಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡು ವ್ಯಾಪಾರೋದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಆಮಿಷ ಒಡ್ಡುತ್ತಿದ್ದ. ಸುಮಾರು ನೂರು ಕೋಟಿ ಸಾಲವನ್ನು ಮೂರರಿಂದ ನಾಲ್ಕು ಶೇಕಡಾ ಬಡ್ಡಿಗೆ ಕೊಡುವ ಭರವಸೆ ಕೊಡುತ್ತಿದ್ದ. ಜಪ್ಪಿನ ಮೊಗರುನಲ್ಲಿರುವ ವೈಭವೋಪೇತ ಬಂಗಲೆಯಲ್ಲಿ ಆದರಾತಿಥ್ಯ ಕೊಡುತ್ತಿದ್ದ. ಇದಕ್ಕಾಗಿ ಮನೆಯಲ್ಲೇ ಬಾರ್ ಮಾದರಿಯ ಕೋಣೆಯನ್ನೂ ರೂಪಿಸಿದ್ದ. ತಾನೊಬ್ಬ ಆಗರ್ಭ ಶ್ರೀಮಂತ ಎಂಬ ರೀತಿಯಲ್ಲಿ ಫೋಸು ಕೊಡುತ್ತಿದ್ದ.ಸಾಲ ಕೇಳಲು ಬರುವ ಉದ್ಯಮಿಗಳಿಂದ ಎಗ್ರಿಮೆಂಟಿಗೆAದು ಮುಂಗಡ ಹಣ ಕೇಳುತ್ತಿದ್ದ. ಅದು ಕೈಗೆ ಬಂದೊಡನೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುತ್ತಿದ್ದ. ಉದ್ಯಮಿಗಳು ನಗದಾಗಿ ಹಣ ಕೊಡುತ್ತಿದ್ದುದರಿಂದ ಪೊಲೀಸರಿಗೆ ದೂರು ನೀಡಲು ಹೋಗುತ್ತಿರಲಿಲ್ಲ. ಇದು ಆತನಿಗೆ ವರದಾನವಾಗಿತ್ತು.ಗುರುವಾರ ರಾತ್ರಿ ಪೊಲೀಸರು ಈತನ ಮನೆಗೆ ದಾಳಿ ಮಾಡಿದಾಗ ಅಲ್ಲಿಯ ವೈಭವ ನೋಡಿಯೇ ದಂಗಾದರು. ಆವರಣ ಪ್ರವೇಶಿಸುವ ಗೇಟ್ ಕೂಡ ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಹೊಂದಿತ್ತು. ಇದರಿಂದಾಗಿ ಪೊಲೀಸರು ಗೇಟ್ ಹಾರಿಯೇ ಒಳಗೆ ನುಗ್ಗಿದರು. ಮನೆಯೊಳಗಡೆಯೇ ಅಡಗುದಾಣದಂತಹ ಕೋಣೆಗಳನ್ನು ಮಾಡಿಕೊಂಡಿದ್ದರಿAದ ಈತ ಮನೆಯಲ್ಲಿದ್ದರೂ ಯಾರ ಕೈಗೂ ಸಿಗುತ್ತಿರಲಿಲ್ಲ. ನಗರ ಪೊಲೀಸ್ ಕಮಿಶನರ್ ಸುಧೀರ್ ಕುಮಾರ್ ರೆಡ್ಡಿ ತಾವೇ ಕಾರ್ಯಾಚರಣೆ ನಿರ್ದೇಶಿಸಿದ್ದರಿಂದ ಕೋಟಿ ಕೋಟಿ ವಂಚಿಸಿದ ಈ ಆರೋಪಿಯ ಬಂಧನವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…