ಸಜೀಪನಡು ಗ್ರಾಮ ಪಂಚಾಯತ್‌ನಿಂದ ಮೂಲಭೂತ ಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಮತ್ತು ದುರಾಡಳಿತ ವಿರೋಧಿಸಿ ಸದಸ್ಯ ನಾಸೀರ್ ಸಜೀಪ ಅವರು ಜು.17ರಂದು ಪಂಚಾಯತ್ ಕಚೇರಿ ಮುಂಭಾಗ ಧರಣಿ ನಡೆಸಿದ್ದಾರೆ.

ಸಜೀಪನಡು ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ನಾಸೀರ್ ಅವರು, ಜು.1 ಮತ್ತು ಜು.5ರಂದು ದಾರಿ ದೀಪ ದುರಸ್ತಿ, ಚರಂಡಿ ಹೂಳೆತ್ತುವ ಬಗ್ಗೆ ದೂರು ನೀಡಿದ್ರು. ಆದರೆ ಈ ಬಗ್ಗೆ ಗ್ರಾಮ ಪಂಚಾಯತ್ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಜು.16ರ ಒಳಗೆ ಮನವಿಗೆ ಸ್ಪಂದಿಸದಿದ್ದಲ್ಲಿ ಜು.17 ರಂದು ಬೇಡಿಕೆ ಈಡೇರುವರೆಗೂ ಪಂಚಾಯತ್ ಕಚೇರಿ ಮುಂಭಾಗ ಧರಣಿ ನಡೆಸುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ನಾಸೀರ್ ಅವರು, ಪಂಚಾಯತ್ ಕಚೇರಿ ಮುಂಭಾಗ ಬೋರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ರು.



