ಮಂಗಳೂರು ನಗರ ಕ್ಲೀನ್ ಸಿಟಿ ಎಂದು ಕರೆಸಿಕೊಳ್ಳುತ್ತದೆ. ಆದ್ರೆ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯ ಮಧ್ಯೆ ಸಿಗುವ ಯೂನಿವರ್ಸಿಟಿ ಕಾಲೇಜಿನ ಗ್ರಂಥಾಲಯದ ಕಪೌಂಡ್ ಸಮೀಪ ಇರುವ ಜಾಗ ಕಸದ ರಾಶಿಯಿಂದ ತುಂಬಿತುಳುಕುತ್ತವೆ.

ಅನಾಮಿಕರು ವಾಹನಗಳಲ್ಲಿ, ನಡೆದಾಡುವಾಗ ಕಸ ಎಸೆದು ಹೋಗ್ತಾರೆ. ಅವರಿಗೆ ಯಾರು ಹೇಳುವವರು ಇಲ್ಲ ಅವರನ್ನು ಕೇಳುವವರು ಇಲ್ಲ ಎಂಬ ಮನಸ್ಥಿತಿ ಅವರದ್ದು. ಪ್ಲಾಸ್ಟಿಕ್‌ಗಳು, ಎಂಚಲು ವಸ್ತುಗಳು ದಿನವು ಈ ಮಾರ್ಗವಾಗಿ ಬರುವ ಅತಿಥಿಗಳನ್ನು ಸ್ವಾಗತಿಸುತ್ತಿವೆ. ಮಳೆಗಾಲದ ಈ ಸಮಯದಲ್ಲಿ ಆ ಭಾಗದಿಂದ ಹರಿಯುವ ನೀರು ಕಲುಷಿತವಾಗಿ ಅಲ್ಲೇ ನಿಂತು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸೊಳ್ಳೆಗಳ ಉತ್ಪಾದನೆಯ ಜಾಗವಾಗಿರುವ ಈ ಪ್ರದೇಶ ಡೆಂಗ್ಯೂ, ಮಲೇರಿಯಾ ರೋಗಕ್ಕೂ ಕಾರಣವಾಗಬಹುದು.

ಆರೋಗ್ಯ ಇಲಾಖೆಯವರು ಇತ್ತ ಕಡೆ ಗಮನಹರಿಸುವುದೇ ಇಲ್ವಾ ಎಂಬ ಸಂಶಯ ಸಾರ್ವಜನಿಕರದ್ದು. ಕೆಲವು ಸಾರಿ ಮೂಗು ಮುಚ್ಚಿ ಆ ಭಾಗದಿಂದ ಹೋಗಬೇಕಾಗುತ್ತೆ. ಸನಿಹವೇ ಪೊಲೀಸ್ ಲೈನ್ ಕೂಡ ಇದೆ. ಆದ್ರೆ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ದಿನ ನಿತ್ಯವೂ ಈ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾ ಇರ್ತಾರೆ. ಅಂಥವರಿಗೆ ಇದು ಕಿರಿ ಕಿರಿ ಮಾಡುವ ಜೊತೆಗೆ ರೋಗಕ್ಕೂ ಕಾರಣವಾಗಲಿದೆ. ಈ ಬಗ್ಗೆ ಸೂಕ್ತವಾದ ಕ್ರಮವನ್ನು ಸ್ಥಳೀಯ ಆಡಳಿತ ವ್ಯವಸ್ಥೆಗಳು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.



