ಜುಲೈ 14ರಂದು ಕುಂದಾಪುರ ತಾಲೂಕು ಕಸಬಾ ಗ್ರಾಮದ ಸಂತೆ ಮಾರ್ಕೆಟ್ ಬಳಿ ಇರುವ 557/6 ನೇ ನಂಬರಿನ ಅಂಗಡಿ ಕೋಣೆಯ ಶಟರ್‌ನ ಬಾಗಿಲ ಬೀಗವನ್ನು ಒಡೆದು ಕಳ್ಳತನ ಮಾಡಿದ್ದಾರೆ.

ಸುಮಾರು 95,000 ರೂಪಾಯಿ ಬೆಲೆಬಾಳುವ ತಾಮ್ರದ ವಯರ್‌ಗಳನ್ನು ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಕಸಬಾದ ಸರ್ಫ್ರಾಜ್, ಜಾಕೀರ್ ಹುಸೈನ್, ಮೊಹಮ್ಮದ್ ಅಲ್ಫಾಝ್ ಇವರನ್ನು ಕೆ.ಎಲ್. 14 ಎ.ಸಿ. 0551 ಮಾರುತಿ ಸುಜುಕಿ ಬಲೆನೋ ವಾಹನ ಸಮೇತ ಉಡುಪಿಯ ಸಂತೆಕಟ್ಟೆಯಲ್ಲಿ ದಸ್ತಗಿರಿ ಮಾಡಲಾಗಿದೆ. ಕಳ್ಳತನ ಮಾಡಲಾದ ಸೊತ್ತುಗಳನ್ನು ಸ್ವೀಕರಿಸಿಕೊಂಡಿರುವ ಮಂಗಳೂರಿನ ಕಿನ್ಯಾದ ಮಹಮ್ಮದ್ ರಿಯಾಜ್‌ನನ್ನು ಪ್ರಕರಣಕ್ಕೆ ಸಂಬಂಧಿಸಿ ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



