ಇತ್ತೀಚೆಗೆ ಪತ್ನಿಯೇ ತನ್ನ ಗಂಡನ ಮುಗಿಸುತ್ತಿರುವ ಘಟನೆಗಳು ಸಾಲು ಸಾಲು ಬೆಳಕಿಗೆ ಬರುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಮಹಿಳೆ ತನ್ನ ಭಾವನ ಜೊತೆಗೆ ಸೇರಿ ಪತಿಗೆ ಮೂಹೂರ್ತ ಇಟ್ಟಿದ್ದಾಳೆ. ಅದು ಜುಲೈ 13.. ನೈಋತ್ಯ ದೆಹಲಿಯ ನಿವಾಸಿ.. 35 ವರ್ಷದ ಕರಣ್ ದೇವ್ ಅನುಮಾನಸ್ಪದ ರೀತಿಯಲ್ಲಿ ಜೀವಕಳೆದುಕೊಂಡಿದ್ದ. ಕರೆಂಟ್ ಶಾಕ್‌ನಿಂದ ಕರಣ್ ಮೃತಪಟ್ಟಿದ್ದಾನೆ ಎಂದು ಪತ್ನಿ ಸುಶ್ಮಿತಾ ಕುಟುಂಬಸ್ಥರನ್ನು ನಂಬಿಸಿದ್ಲು.. ಈಕೆಯ ಮಾತನ್ನು ನಂಬಿದ್ದ ಮನೆಯವರು, ಮರಣೋತ್ತರ ಪರೀಕ್ಷೆಯೇನು ಬೇಡ ಎಂದು ಸುಮ್ಮನಾಗಿದ್ರು.
ಆದ್ರೆ ಮರುದಿನ ಕರಣ್ ದೇವ್ ಅಸಹಜ ನಿಧನದ ಹಿಂದಿನ ರಹಸ್ಯ ಬಯಲಾಗಿದೆ. ಅನುಮಾನ ವ್ಯಕ್ತಪಡಿಸಿದ್ದ ಪೊಲೀಸ್ರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಮರು ದಿನ ಮೃತ ಕರಣ್ ಸಹೋದರ ಪೊಲೀಸರಿಗೆ ತಂದು ನೀಡಿದ ಸಾಕ್ಷ್ಯದಿಂದ ಸುಶ್ಮಿತಾಳ ಕಳ್ಳಾಟ ಬಯಲಾಗಿದೆ.. ಸುಶ್ಮಿತಾಳ ಫೋನ್‌ನಲ್ಲಿ ರಾಹುಲ್ ಹಾಗೂ ಸುಶ್ಮಿತಾ ಅವರ ಚಾಟಿಂಗ್ ಶಾಕ್. ಬೆಚ್ಚಿಬೀಳಿಸಿದೆ. ಗಂಡನನ್ನ ಯಾವ ರೀತಿ ಮುಗಿಸಬೇಕು ಎಂಬುದನ್ನು ಸುಶ್ಮಿತಾ.. ಮತ್ತು ಆಕೆಯ ಭಾವ ಕಮ್ ಪ್ರಿಯಕರ ರಾಹುಲ್ ಇಬ್ಬರೂ ಸೇರಿ ತುಂಬಾ ಚೆನ್ನಾಗಿ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ ಆದರೆ ಇವರ ಅಸಲಿಯತ್ತು ಬಯಲಾಗಿದ್ದು ಇನ್ಸಾ÷್ಟಗ್ರಾಮ್ ಚಾಟ್‌ನಿಂದ. ಇನ್ನು ಸುಶ್ಮಿತಾಳ ಅಸಲಿ ಮುಖವಾಡ ಬಯಲಾಗ್ತಿದ್ದಂತೆ, ಪೊಲೀಸರು ಸುಶ್ಮಿತಾ ಮತ್ತು ರಾಹುಲ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಒಟ್ಟಾರೆ ಇತ್ತೀಚಿಗೆ ದೇಶದಲ್ಲಿ ನಡೆಯುತ್ತಿರುವ ಸಾಲು ಸಾಲು ಗಂಡAದಿರ ಕೊಲೆ ಪ್ರಕರಣ ಮದುವೆಯಾದ ಗಂಡಸರನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…