ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು: ಇನ್‌ಸ್ಟಾದಲ್ಲಿ ಪರಿಚಯವಾದ ಆಂಟಿ ಜೊತೆ ಲವ್; ಜೈಲು ಪಾಲಾದ ಪಾಗಲ್ ಪ್ರೇಮಿ

ಇನ್‌ಸ್ಟಾದಲ್ಲಿ ಪರಿಚಯವಾದ ಮಹಿಳೆ ಜೊತೆಗೆ ಮಾತುಕತೆಗೆ ಅಂತ ಬಂದವನು ಆಕೆಯ ಸಂಬಂಧಿಗೆ ಕತ್ತುಕೊಯ್ದ ಘಟನೆ ಹೆಚ್‌ಎಸ್‌ಎಲ್‌ನಲ್ಲಿ ನಡೆದಿದೆ.

ಸೆಲ್ವ ಕಾರ್ತಿಕ್ ಬಂಧಿತ ಆರೋಪಿಯಾಗಿದ್ದಾನೆ. ತಿರಪ್ಪತ್ತೂರು ಮೂಲದ ಸೆಲ್ವ ಕಾರ್ತಿಕ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆ ಜೊತೆಗೆ ಪರಿಚಯ ಆಗುತ್ತೆ. ಹೀಗೆ ದಿನ ಕಳೆದಂತೆ ಕಾರ್ತಿಕ್ ಇನ್‌ಸ್ಟಾದಲ್ಲಿ ಮಹಿಳೆಗೆ ಮೆಸೇಜ್ ಮಾಡಿ ಪೀಡಿಸ್ತಿದ್ದನಂತೆ. ಆದ್ರೆ, ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಕಾರ್ತಿಕ್ ಮೆಸೇಜ್ ಮಾಡುತ್ತಿದ್ದ ವಿಚಾರವನ್ನು ಗಂಡನಿಗೂ ಹೇಳದೆ ತಂದೆಗೆ ತಿಳಿಸಿದ್ದಳು. ಇನ್ನೂ, ಈ ವಿಚಾರ ತಂದೆಗೆ ಗೊತ್ತಾಗುತ್ತಿದ್ದಂತೆ ಕಾರ್ತಿಕ್ ಜೊತೆ ಮಾತಾಡಲು ಹೆಚ್‌ಎಸ್‌ಎಲ್‌ಗೆ ಕರೆಸಿದ್ದರು. ಮಾತುಕತೆ ಬಳಿಕ ಕಾರ್ತಿಕ್ ಮಹಿಳೆ ಜೊತೆ ಮಾತನಾಡಬೇಕು ಅಂತ ಹೇಳಿದ್ದಾನೆ. ಈ ವೇಳೆ ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಕಡೆ ಹೊರಟಿದ್ರು, ಆಗ ಅದೇನ್ ಆಯ್ತೋ ಗೊತ್ತಿಲ್ಲ ಮಹಿಳೆ ಸಂಬಂಧಿಗೆ ಕಾರ್ತಿಕ್ ಚಾಕು ಇರಿದಿದ್ದಾನೆ. ಬೈಕ್‌ನಲ್ಲಿಯೇ ಪ್ರಶಾಂತ್ ಎಂಬಾತನ ಕತ್ತುಕೊಯ್ದಿದ್ದಾನೆ. ಆ ಕೂಡಲೇ ಗಾಯಾಳು ಯುವಕನನ್ನು ಆಸ್ಪತ್ಸೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿ ಕಾರ್ತಿಕ್‌ನನ್ನು ಹೆಚ್‌ಎಸ್‌ಎಲ್ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!