ಇನ್‌ಸ್ಟಾದಲ್ಲಿ ಪರಿಚಯವಾದ ಮಹಿಳೆ ಜೊತೆಗೆ ಮಾತುಕತೆಗೆ ಅಂತ ಬಂದವನು ಆಕೆಯ ಸಂಬಂಧಿಗೆ ಕತ್ತುಕೊಯ್ದ ಘಟನೆ ಹೆಚ್‌ಎಸ್‌ಎಲ್‌ನಲ್ಲಿ ನಡೆದಿದೆ.
ಸೆಲ್ವ ಕಾರ್ತಿಕ್ ಬಂಧಿತ ಆರೋಪಿಯಾಗಿದ್ದಾನೆ. ತಿರಪ್ಪತ್ತೂರು ಮೂಲದ ಸೆಲ್ವ ಕಾರ್ತಿಕ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆ ಜೊತೆಗೆ ಪರಿಚಯ ಆಗುತ್ತೆ. ಹೀಗೆ ದಿನ ಕಳೆದಂತೆ ಕಾರ್ತಿಕ್ ಇನ್‌ಸ್ಟಾದಲ್ಲಿ ಮಹಿಳೆಗೆ ಮೆಸೇಜ್ ಮಾಡಿ ಪೀಡಿಸ್ತಿದ್ದನಂತೆ. ಆದ್ರೆ, ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಕಾರ್ತಿಕ್ ಮೆಸೇಜ್ ಮಾಡುತ್ತಿದ್ದ ವಿಚಾರವನ್ನು ಗಂಡನಿಗೂ ಹೇಳದೆ ತಂದೆಗೆ ತಿಳಿಸಿದ್ದಳು. ಇನ್ನೂ, ಈ ವಿಚಾರ ತಂದೆಗೆ ಗೊತ್ತಾಗುತ್ತಿದ್ದಂತೆ ಕಾರ್ತಿಕ್ ಜೊತೆ ಮಾತಾಡಲು ಹೆಚ್‌ಎಸ್‌ಎಲ್‌ಗೆ ಕರೆಸಿದ್ದರು. ಮಾತುಕತೆ ಬಳಿಕ ಕಾರ್ತಿಕ್ ಮಹಿಳೆ ಜೊತೆ ಮಾತನಾಡಬೇಕು ಅಂತ ಹೇಳಿದ್ದಾನೆ. ಈ ವೇಳೆ ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಕಡೆ ಹೊರಟಿದ್ರು, ಆಗ ಅದೇನ್ ಆಯ್ತೋ ಗೊತ್ತಿಲ್ಲ ಮಹಿಳೆ ಸಂಬಂಧಿಗೆ ಕಾರ್ತಿಕ್ ಚಾಕು ಇರಿದಿದ್ದಾನೆ. ಬೈಕ್‌ನಲ್ಲಿಯೇ ಪ್ರಶಾಂತ್ ಎಂಬಾತನ ಕತ್ತುಕೊಯ್ದಿದ್ದಾನೆ. ಆ ಕೂಡಲೇ ಗಾಯಾಳು ಯುವಕನನ್ನು ಆಸ್ಪತ್ಸೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿ ಕಾರ್ತಿಕ್‌ನನ್ನು ಹೆಚ್‌ಎಸ್‌ಎಲ್ ಪೊಲೀಸರು ಬಂಧಿಸಿದ್ದಾರೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…