ಬಂಟ್ವಾಳ: ಪೋಲೀಸ್ ಉಪನಿರೀಕ್ಷಕರುಗಳ ವರ್ಗಾವಣೆ ಅದೇಶವನ್ನು ಸರಕಾರ ಹೊರಡಿಸಿದ್ದು,ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ಆಗಿದ್ದ ರಾಮಕೃಷ್ಣ ಅವರನ್ನು ವಿಟ್ಲ ಪೋಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಸಂದೀಪ್ ಶೆಟ್ಟಿ ಹಾಗೂ ಪುಂಜಾಲಕಟ್ಟೆ ಎಸ್. ಐ.ಆಗಿದ್ದ ನಂದಕುಮಾರ್ ಅವರು ಪೋಲೀಸ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಪುಂಜಾಲಕಟ್ಟೆ ಠಾಣೆಗೆ ಚಿಕ್ಕಮಗಳೂರಿನಿಂದ ರಾಜೇಶ್ ಕೆ.ವಿ ಅವರನ್ನು, ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.

ಸಂದೀಪ್ ಶೆಟ್ಟಿ ಅವರುಈ ಹಿಂದೆ ವಿಟ್ಲ ಹಾಗೂ ರಾಜೇಶ್ ಕೆ.ವಿ ಅವರು ಬಂಟ್ವಾಳ ಟ್ರಾಫಿಕ್ ಹಾಗೂ ಉಪ್ಪಿನಂಗಡಿಯಲ್ಲಿ ಕರ್ತವ್ಯ ಮಾಡಿ ಜಿಲ್ಲೆಯ ಅನುಭವಿ ಅಧಿಕಾರಿಗಳಾಗಿದ್ದಾರೆ.



