ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ಹೃದಯಾಘಾತದಿಂದ ನಿಧನ

ಕಲ್ಲಡ್ಕ ಕಲಾಪರಂಪರೆಯ ಹಿರಿಯ ಕಲಾವಿದ ತುಳುರಂಗಭೂಮಿಯ ನಟ ನಿರ್ದೇಶಕ ಚಿ.ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಇಂದು  ಮುಂಜಾನೆ  ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ.

ರಂಗಭೂಮಿಯಲ್ಲಿ 30 ವರ್ಷಕ್ಕೂ ಮಿಕ್ಕಿ ಕಲಾಸೇವೆಗೈದಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ಗರಡಿಯಲ್ಲಿ ಪಳಗಿದ ರಮೇಶ್ ಕಲ್ಲಡ್ಕ ಕಲಾಸಂಗಮದ ಎಲ್ಲಾ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ “ಶಿವದೂತಗುಳಿಗೆ” ನಾಟಕದ ಭೀಮಾರಾವ್ ಪಾತ್ರ ಅವರಿಗೆ ಹೆಸರನ್ನು, ಹೊಸ ಇಮೇಜನ್ನು ತಂದು ಕೊಟ್ಟಿದೆ. ಶಿವಾಜಿ ನಾಟಕದಲ್ಲೂ ಅವರು ನಿರ್ವಹಿಸಿದ ದಾದ ಕೊಂಡೆಯ ಪಾತ್ರ ಗಮನ ಸಳೆದಿತ್ತು. ಸರಳ ಸೌಮ್ಯಸ್ವಭಾವದ ರಮೇಶ್ ಕಲ್ಲಡ್ಕ ಅವರು ರಂಗಭೂಮಿಯಲ್ಲಿ ಶಿಸ್ತಿನ ಕಲಾವಿದರಾಗಿದ್ದರು. ಕಲಾಸಂಗಮದ ಮೂಲಕ ಮುಂಬೈ, ಬೆಂಗಳೂರು ಸಹಿತ ಬೇರೆ ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದರು. 1957 ಏಪ್ರಿಲ್ ನಲ್ಲಿ ಜನಿಸಿದ ಅವರು, ಶಾಂತಾರಾಮ ಕಲ್ಲಡ್ಕ ಅವರ ಮಿತ್ರಬಳಗ ಕಲಾತಂಡದ ಮೂಲಕ ತನ್ನ ರಂಗಪಯಣವನ್ನು ಎಳವೆಯಲ್ಲೇ ಆರಂಭಿಸಿದ್ದರು,. ಬಳಿಕ ಶಾಂತಾರಾಮ ಕಲ್ಲಡ್ಕ ಅವರ ತುಳುವಪ್ಪೆ ಜೋಕುಲು ಕಲಾಬಳಗದಲ್ಲೂ ತೊಡಗಿಸಿಕೊಂಡ ರಮೇಶ್, ತುಳು ವೃತ್ತಿ ರಂಗಭೂಮಿ ಪ್ರವೇಶಿಸಿದರು. ಬಳಿಕ ಕಲ್ಲಡ್ಕದಲ್ಲಿ ಮೈತ್ರಿ ಕಲಾವಿದರು ತಂಡ ಸ್ಥಾಪಿಸಿ, ಕಲ್ಲಡ್ಕ ಶಾರದೋತ್ಸವದಲ್ಲಿ ತಂಡದ ನಾಟಕ ಪ್ರದರ್ಶಿಸುತ್ತಿದ್ದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿ ಸುದೀರ್ಘ ಕಾಲ ತನ್ನ ವೃತ್ತಿಪಯಣವನ್ನು ನಡೆಸಿದ ಅವರು ಆ ತಂಡದ ಹಿರಿಯ ಹಾಗೂ ಪ್ರಮುಖ ಕಲಾವಿದರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದ ರಮೇಶ್ ಕಲ್ಲಡ್ಕ ಅವರ ನಿಧನಕ್ಕೆ ತುಳುರಂಗಭೂಮಿ ಆಘಾತಗೊಂಡಿದೆ. ಒರಿಯರ್ದೊರಿ ಅಸಲ್, ಮದಿಮೆ ಸಹಿತ ಕೊಡಿಯಾಲ್ ಬೈಲ್ ಅವರ ಜನಪ್ರಿಯ ತುಳು ನಾಟಕಗಳಲ್ಲಿ ರಮೇಶ್ ಅವರು ಗಮನ ಸೆಳೆದಿದ್ದರೆ, ಇತ್ತೀಚಿನ ಶಿವದೂತಗುಳಿಗೆ, ಶಿವಾಜಿ ನಾಟಕಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಅವರು ಕಲ್ಲಡ್ಕ ಪರಿಸರದ ಶಾರದೋತ್ಸವ ಸಮಿತಿ ಸಹಿತ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಶಾರದೋತ್ಸವ ಸಮಿತಿಯ ಸ್ಥಾಪಕ ಟ್ರಸ್ಟಿಯಾಗಿದ್ದರು.ರಮೇಶ್ ಕಲ್ಲಡ್ಕ ಅವರ ನಿಧನ ಅಂತು ತುಳುರಂಗಭೂಮಿಗೆ ತುಂಬಲಾರದ ನಷ್ಟ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!