ಜನ ಮನದ ನಾಡಿ ಮಿಡಿತ

Advertisement

ಪುತ್ತೂರು: ಬಸ್ ನಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ; ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಮಂಗಳೂರಿನಿ0ದ ಪುತ್ತೂರಿಗೆ ಬರುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿ ಜೊತೆ ಓರ್ವ ಅನುಚಿತವಾಗಿ ವರ್ತಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರೆಯ ಮಾಹಿತಿ ಪ್ರಕಾರ, ನಿನ್ನೆ ಮಂಗಳೂರಿನಿ0ದ ಪುತ್ತೂರಿಗೆ ಬಸ್‌ನಲ್ಲಿ ಸಂಜೆ 6:30ರ ಸುಮಾರಿಗೆ ಪ್ರಯಾಣಿಸುತ್ತಿದ್ದಾಗ, ಬಂಟ್ವಾಳ ತಾಲೂಕಿನ ಮಾಣಿ ಬಳಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾನೆ. ತಕ್ಷಣ ದೂರುದಾರರು ಆತನಿಗೆ ಎಚ್ಚರಿಕೆ ನೀಡಿದ್ದು, ಬಳಿಕ ತಂದೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್ ಪುತ್ತೂರು ಬಸ್ ನಿಲ್ದಾಣ ತಲುಪಿದಾಗ, ಆರೋಪಿ ತುರ್ತು ನಿರ್ಗಮನ ಕಿಟಕಿಯ ಮೂಲಕ ಜಿಗಿದು ಪರಾರಿಯಾಗಲು ಯತ್ನಿಸಿದರೂ, ದೂರುದಾರರ ತಂದೆ ಮತ್ತು ಸಾರ್ವಜನಿಕರು ತಕ್ಷಣ ಪ್ರತಿಕ್ರಿಯಿಸಿ ಆರೋಪಿಯನ್ನು ಹಿಡಿದಿಟ್ಟಿದ್ದಾರೆ. ಬಂಧಿತನನ್ನು ಮಂಗಳೂರಿನ ಮಹಮ್ಮದ್ ತೌಹೀದ್ ಎಂದು ಗುರುತಿಸಲಾಗಿದ್ದು, ಆತನನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಸಂಬ0ಧ ಅ.ರ್ರ.56/2025ಕಲಂ 0 75 BNS 2023 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಮಮತಾ ಪಿ. ಶೆಟ್ಟಿ..!

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

error: Content is protected !!