ಉಪ್ಪಿನಂಗಡಿ: ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಸಮೀಪದ ಎಡ್ತಿಲ್ಲ ಎಂಬಲ್ಲಿ ಮಂಗಳವಾರ(ಜು 22) ನಡೆದಿದೆ.

ನೆಲ್ಯಾಡಿ ಸಮೀಪದ ಬರೆಗುಡ್ಡೆ ನಿವಾಸಿ ವಿಜೇಶ್ ಎ(43) ಮೃತ ವ್ಯಕ್ತಿಯಾಗಿದ್ದಾರೆ. ಪ್ರತಿ ದಿನದಂತೆ ಮಂಗಳವಾರ ಬೆಳಗ್ಗೆ ಎಡ್ತಿಲ್ಲ ಮಣ್ಣಗುಂಡಿ ಬಳಿಯ ತಮ್ಮ ತೋಟಕ್ಕೆ ತೆರಳಿದ್ದ ಸಂದರ್ಭ, ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರೆ ಎಂದು ತಿಳಿದುಬಂದಿದೆ. ಮೃತರು ತಾಯಿ, ಪತ್ನಿ, ಹಾಗೂ ಮಗನನ್ನು ಅಗಲಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



