ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ಆಗಿ ಸಂದೀಪ್ ಶೆಟ್ಟಿ ಅವರು ಪ್ರಭಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಕರ್ತವ್ಯ ಮಾಡಿ ಇದೀಗ ವಿಟ್ಲ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಎಸ್.ಐ. ರಾಮಕೃಷ್ಣ ಅವರ ಸ್ಥಾನಕ್ಕೆ ಸ್ಥಳ ನಿರೀಕ್ಷಣೆಯಲ್ಲಿದ್ದ ಸಂದೀಪ್ ಶೆಟ್ಟಿ ಅವರನ್ನು ಬಂಟ್ವಾಳ ನಗರ ಠಾಣೆಗೆ ವರ್ಗಾಯಿಸಿ ಸರಕಾರ ಅದೇಶ ಹೊರಡಿಸಿತ್ತು. ಹಾಗಾಗಿ ಇಂದು ಬೆಳಿಗ್ಗೆ ವೇಳೆ ಸಂದೀಪ್ ಶೆಟ್ಟಿ ಅವರು ಕರ್ತವ್ಯಕ್ಕೆ ಹಾಜರಾದರು. ಸಂದೀಪ್ ಶೆಟ್ಟಿ ಅವರು ಈ ಹಿಂದೆ ಅಂದರೆ ಸುಮಾರು ಎರಡು ವರ್ಷಗಳ ಹಿಂದೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಜಿಲ್ಲೆಯ ಅನುಭವ ಇರುವ ಅಧಿಕಾರಿಯಾಗಿದ್ದು,ಬಳಿಕ ಕಾರ್ಕಳ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.



