ಕರಾವಳಿ

ಮಂಗಳೂರು: ಇಂಡಿಯಾನಾ ಆಸ್ಪತ್ರೆಯಲ್ಲಿ ಯಶಸ್ವಿ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ

ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ಮಂಗಳೂರು ನಗರದ ಮೊಟ್ಟಮೊದಲ ಯಶಸ್ವಿ ವಿಶಿಷ್ಟ ಹೃದಯ ಕವಾಟ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ ನಡೆಸಲಾಗಿದೆ ಎಂದು ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್‌ನ ಚೀಫ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಎಂಡಿ ಡಾ. ಯೂಸೂಫ್ ಕುಂಬ್ಳೆ ತಿಳಿಸಿದರು.

ತೀವ್ರವಾದ ಆಯೊರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಶಸಚಿಕಿತ್ಸೆ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ, 10-15 ವರ್ಷಗಳಲ್ಲಿ ಆ ವಾಲ್ವ್ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯ ಶಸಚಿಕಿತ್ಸೆ ಅಗತ್ಯವಿದ್ದು, ಇದು ವಯಸ್ಕ ರೋಗಿಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ನೂತನ ತಂತ್ರಜ್ಞಾನ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಬಹುಮಟ್ಟಿಗೆ ಸುರಕ್ಷಿತವಾದ ಆಯ್ಕೆ. ಇದರಲ್ಲಿ ಹಳೆಯ ವಾಲ್ವ್ ಒಳಗೆ ಹೊಸ ವಾಲ್ವ್ನ್ನು ಸ್ಥಾಪಿಸಲಾಗುತ್ತದೆ. ಈ ವಿಧಾನ ಸಾಮಾನ್ಯ ಟಿಎವಿಆರ್‌ಗಿಂತ ಹೆಚ್ಚು ಜಟಿಲ ಹಾಗೂ ಹೆಚ್ಚಿನ ತಾಂತ್ರಿಕ ನಿಪುಣತೆ ಅಗತ್ಯವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. 110 ಕೆಜಿ ತೂಕದ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಮುಂತಾದ ಹಲವಾರು ಸಮಸ್ಯೆಗಳುಳ್ಳ 72 ವರ್ಷದ ರೋಗಿಯೊಬ್ಬರು 20 ವರ್ಷದ ಹಿಂದೆ ಕೊಚ್ಚಿಯಲ್ಲಿ ಎಸ್‌ಎವಿಆರ್ ಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ ಹೃದಯ ವಿಫಲತೆಯ ಲಕ್ಷಣದೊಂದಿಗೆ ಇಂಡಿಯಾನಾ ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ಮತ್ತೆ ಶಸಚಿಕಿತ್ಸೆ ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ, ಅವರ ಹೆಚ್ಚಿನ ಅಪಾಯದ ಕಾರಣದಿಂದ ಹಲವು ಆಸ್ಪತ್ರೆಗಳು ನಿರಾಕರಿಸಿದ್ದವು. ವಿವಿಧ ಕಡೆ ನಿರಾಕರಣೆ ಅನುಭವಿಸಿದ ಅವರು ಅಂತಿಮವಾಗಿ ಡಾ. ಯೂಸುಫ್ ಕುಂಬ್ಳೆ ಅವರನ್ನು ಸಂಪರ್ಕಿಸಿದರು. ಸಂಪೂರ್ಣ ತಪಾಸಣೆಯ ನಂತರ ಅವರಿಗೆ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಸೂಕ್ತ ಮತ್ತು ಸುರಕ್ಷಿತ ಎಂದು ನಿರ್ಧರಿಸಲಾಯಿತು. ರೋಗಿಗೆ ವಾಲ್ವ್ ಸಮಸ್ಯೆ ಜತೆಗೆ ಪ್ರಮುಖ ರಕ್ತನಾಳಗಳ ಅಡಚಣೆಯೂ ತಪಾಸಣೆಯಲ್ಲಿ ಪತ್ತೆಯಾಗಿತ್ತು. ತಜ್ಞರ ತಂಡ ಈ ಎರಡೂ ಸಮಸ್ಯೆಗಳಿಗೆ ಒಂದೇ ಸಂದರ್ಭದಲ್ಲಿ ಪರಿಹಾರ ನೀಡಲು ನಿರ್ಧರಿಸಿತು. ಮೊದಲು ಆಂಜಿಯೋಪ್ಲಾಸ್ಟಿ ನಡೆಸಿ ಪ್ರಮುಖ ರಕ್ತನಾಳಗಳ ಅಡಚಣೆಗೆ ಚಿಕಿತ್ಸೆ ನೀಡಲಾಯಿತು. ಬಳಿಕ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲಾಯಿತು ಎಂದು ವಿವರಿಸಿದರು. ಅದೇ ದಿನ 80 ವರ್ಷದ ಮಹಿಳೆಗೂ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ನಡೆಸಲಾಯಿತು. 20 ವರ್ಷದ ಹಿಂದೆ ವಾಲ್ವ್ ಬದಲಾವಣೆ ಶಸಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆ ಮತ್ತೆ ಹೃದಯ ವಿಫಲತೆಯಿಂದ ಬಳಲುತ್ತಿದ್ದರು. ಅವರು ಇನ್ನೊಂದು ಶಸಚಿಕಿತ್ಸೆಗೆ ಸಿದ್ದರಿದ್ದರೂ, ಹೆಚ್ಚಿನ ಅಪಾಯದ ಕಾರಣದಿಂದ ಯಾವುದೇ ವೈದ್ಯರು ಶಸಚಿಕಿತ್ಸೆ ನಡೆಸಲು ಒಪ್ಪಿರಲಿಲ್ಲ. ಮೊದಲ ರೋಗಿಗೆ ಯಶಸ್ವಿ ಚಿಕಿತ್ಸೆ ನಡೆದಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಮಹಿಳೆ ಒಪ್ಪಿಗೆ ಸೂಚಿಸಿದರು. ಒಂದು ಗಂಟೆಯೊಳಗೆ ಅವರಿಗೂ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಮಾಡಲಾಯಿತು. ಆ ಮೂಲಕ ಇಂಡಿಯಾನಾ ಆಸ್ಪತ್ರೆ ಈಗ ಟಿಎವಿಆರ್/ ಟಿಎವಿಐ ಮತ್ತು ಸ್ಟ್ರಕ್ಚುರಲ್ ಹಾರ್ಟ್ ಕೇರ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು. ಇಂಡಿಯಾನಾ ಆಸ್ಪತ್ರೆ ಮಾರುಕಟ್ಟೆ ಸಲಹೆಗಾರ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

2 hours ago

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನವನ್ನು…

2 hours ago

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

  ಬಸ್‌ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…

8 hours ago

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

  ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…

8 hours ago

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…

3 days ago

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…

3 days ago