ಭಾರೀ ಗಾಳಿ ಮಳೆಗೆ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ವೀರಮಲೆಯಲ್ಲಿ ಬುಧವಾರ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ.

ಗುಡ್ಡ ಕುಸಿಯುವ ಸಂದರ್ಭದಲ್ಲಿ ಹಲವು ವಾಹನಗಳು ರಸ್ತೆಯಲ್ಲಿ ತೆರಳುತ್ತಿತ್ತು. ಒಂದು ಕಾರು ಮಣ್ಣಿನಡಿ ಸಿಲುಕಿದ್ದರೂ ಪ್ರಯಾಣಿಕರೋರ್ವರು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿದೆ. ಮಣ್ಣು ತೆರವುಗೊಳಿಸುವ ಕಾರ್ಯ ಕೂಡ ನಡೆಯುತ್ತಿದೆ. ತಿಂಗಳ ಹಿಂದೆಯೂ ಮಣ್ಣು ಕುಸಿದಿತ್ತು. ಇದರಿಂದ ಕೆಲ ದಿನಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.



