ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯಕಾರಿ ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಕೊಂಕಣಿ ಭಾಷೆಗೆ 27 ಪುಸ್ತಕ ದೇಣಿಗೆ ನೀಡಿದ ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಕೆಬಿಎಂಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಲೈಬ್ರೆರಿಗಳಲ್ಲಿ ಹುಡುಕಿ ಹಲವು ಸಾಹಿತ್ಯದ ವಿವಿಧ ದಾಖಲೆಗಳನ್ನು ತೆಗೆದು ತನ್ನ ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಾಶನ ಮಾಡಿದ ಸಾಹಿತ್ಯದ ಶ್ರಮಜೀವಿ ಗ್ಲ್ಯಾಡಿಸ್ ರೇಗೊ ಆಗಿದ್ದರು ಎಂದು ಗುಣಗಾನ ಮಾಡಿದರು. ಕವಿ ಜೊಸ್ಸಿ ಪಿಂಟೊ ಮಾತನಾಡಿ, ಕೊಂಕಣಿ ಪತ್ರಿಕೆಗಳಿಗೆ ಪ್ರಸಾರ, ಪ್ರಕಟನೆ ಮಾಡಲು ಆರ್ಥಿಕ ಸಹಾಯ ನೀಡುವ ಮೂಲಕ ಬೆಂಬಲ ನೀಡಿದ್ದರು ಎಂದು ನೆನಪಿಸಿದರು. ಜೂಲಿಯೆಟ್ ಫೆರ್ನಾಂಡೀಸ್ ಮಾತನಾಡಿ, ಮಹಿಳೆಯರು ಮನೆ ಮಕ್ಕಳು ನೋಡಿಕೊಂಡು ಸಾಹಿತ್ಯದ ಕೆಲಸವನ್ನು ಮಾಡುವುದು ಸುಲಭವಲ್ಲ ಎಂದರು.
ಇನ್ನು ಗ್ಲ್ಯಾಡಿಸ್ ಅವರ ಸಾಹಿತ್ಯದ ಒಡನಾಡಿ ಹಿರಿಯರು ಗೀತಾ ಕಿಣಿಯವರು ಮಾತನಾಡುತ್ತಾ, ತಾನು ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳಲ್ಲಿ ರೇಗೊ ಭಾಗವಹಿಸಿ ತನ್ನ ಮತ್ತು ಇತರ ಪುಸ್ತಕ ಮಾರಾಟ ಮಾಡಿ ಸಕ್ರಿಯವಾಗಿ ಇಡೀ ಸಭೆಯಲ್ಲಿ ಜನರಿಗೆ ಸಿಗುತ್ತಿದ್ದರು ಎಂದು ನೆನಪಿಸಿದರು. ಕೆಬಿಎಂಕೆ ಅಧ್ಯಕ್ಷ ಕೆ ವಸಂತ ರಾವ್ ಮಾತನಾಡಿ, ಕೆಬಿಎಂಕೆ ಸಕಲ ಕೊಂಕಣಿ ಜನರ ಮನೆ. ಇದರಲ್ಲಿ ನಾವು ಎಲ್ಲಾ ಜನರಿಗೆ ಆದ್ಯತೆ ನೋಡುತ್ತೇವೆ. ರೇಗೊ ಪಂಚ್ಕದಾಯಿ ಬಾಳೊಮಾಮ್ ಅವರ ಒಡನಾಡಿ ನಾನು ಕಂಡಿದ್ದೇನೆ ಎಂದರು. ಖಜಾಂಜಿ ಸುರೇಶ್ ಶೆಣೈ, ಎಡೊಲ್ಫ್ ಡಿಸೋಜ, ನವೀನ ನಾಯಕ್, ಮೀನಾಕ್ಷಿ ಪೈ, ಝೀನಾ ಫೆರ್ನಾಂಡೀಸ್, ಅರವಿಂದ ಶಾನಭಾಗ್, ಶಾಂತಿ ವೆರೊನಿಕಾ ಹಾಜರಿದ್ದು ಹೂವಿನ ಗೌರವ ಅರ್ಪಿಸಿದರು.
ಬಸ್‌ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…
ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…