ಫ್ರಿಡ್ಜ್ನಲ್ಲಿದ್ದ ಚಿಕನ್, ಮಟನ್, ಬೋಟಿ ಬಿಸಿ ಮಾಡಿ ತಿಂದು ಒಬ್ಬ ಸಾವನ್ನಪ್ಪಿದ್ದು, ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದೆ.

ಮೃತ ವ್ಯಕ್ತಿ 46 ವರ್ಷದ ಶ್ರೀನಿವಾಸ್ ಯಾದವ್ ಎಂದು ತಿಳಿದುಬಂದಿದೆ. ಈತನ ಮನೆಯಲ್ಲಿ ಹಬ್ಬದ ಪ್ರಯುಕ್ತ ಚಿಕನ್, ಮಟನ್, ಮತ್ತು ಬೋಟಿ ಮಾಡಿಲಾಗಿತ್ತು. ಮರುದಿನ ಶ್ರೀನಿವಾಸ್ ಯಾದವ್ ಕುಟುಂಬ ಉಳಿದ ಮಾಂಸವನ್ನು ಬಿಸಿ ಮಾಡಿ ಸೇವಿಸಿದ್ದು, ಸ್ವಲ್ಪ ಸಮಯದಲ್ಲೇ ಕುಟುಂಬದ 9 ಜನರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತು. ಕೂಡಲೇ ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಗಿದೆ. ಅದಾಗಲೇ ಶ್ರೀನಿವಾಸ್ ಯಾದವ್ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ಮೂವರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಉಳಿದವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಫುಡ್ ಪಾಯಿಸನಿಂದ ಆರೊಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಪೋಸ್ಟ್ ಮಾರ್ಟಮ್ ವರದಿ ಬಂದ ನಂತರವೆ ಸಾವಿಗೆ ನಿಖರ ಕಾರಣ ತಿಳಿದುಬರಬೆಕಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.



