ಗಂಡ ಹೆಂಡತಿ ಜಗಳದಲ್ಲಿ ಹೆತ್ತ ಮಗಳನ್ನು ತಾಯಿಯೇ ಕೊಂದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಂಡನೊಂದಿಗಿನ ಪ್ರತಿದಿನ ಜಗಳಕ್ಕೆ ಬೇಸೆತ್ತು ಮಗಳನ್ನೂ ಕೊಂದು 28 ವರ್ಷದ ತಾಯಿ ಮಹಾಲಕ್ಷ್ಮಿ ಕೂಡ ಆತ್ಮಹತ್ಯೆಗೆ ಪ್ರಯತ್ನಸಿದ್ದು, ತನ್ನ 5 ವರ್ಷದ ಪುಟ್ಟ ಕಂದಮ್ಮ ಸಿರಿಯನ್ನ ಕೊಂದೇ ಬಿಟ್ಟಿದ್ದಾಳೆ ಪಾಪಿ ತಾಯಿ.

ಜಯರಾಮ್ ಎನ್ನುವ ವ್ಯಕ್ತಿಯನ್ನು 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಎರಡು ವರ್ಷದಿಂದ ಜಯರಾಮ್ ಯಾವುದೇ ಕೆಲಸವಿಲ್ಲದೆ ಕೇವಲ ಕುಡಿತದ ದಾಸನಾಗಿದ್ದ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಕುಡಿದು ಬಿದ್ದ ಗಂಡನಿಂದ ಬೇಸೆತ್ತು ಗಂಡ ಹೆಂಡತಿ ಮಧ್ಯೆ ಯಾವಾಗಲೂ ಜಗಳವಾಗುತ್ತಿತ್ತು. ಬುಧವಾರ ಇಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿ ಮಹಾಲಕ್ಷ್ಮಿ ರೂಮ್ ಬಾಗಿಲು ಹಾಕಿಕೊಂಡಿದ್ದಾಳೆ. ಸಿಟ್ಟಿನಿಂದ ಮಗುವಿನ ಕತ್ತು ಹಿಸುಕಿ ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಮಹಾಲಕ್ಷ್ಮಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ, ಮನೆಯವರು ಡೋರ್ ಒಡೆದು ಒಳಹೊಕ್ಕಿದ್ದಾರೆ. ಸ್ಠಳಿಯರಿಂದ ತಾಯಿ ಮಹಾಲಕ್ಷ್ಮಿ ರಕ್ಷಣೆ ಮಾಡಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



