ಬಹುಮುಖ ಪ್ರತಿಭೆ, ವೃತ್ತಿಯಲ್ಲಿ ವಕೀಲೆಯಾದ ರಾಜಶ್ರೀ ಜೆ ಪೂಜಾರಿಯವರು ನಿಧನರಾಗಿದ್ದಾರೆ.

ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಗಾಖಲಿಸಲಾಗಿತ್ತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಬಹುಗಾರ್ತಿ, ಸಾಹಿತಿ, ನಿರೂಪಕಿ, ವಕೀಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ, ಹಾಗೆಯೇ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ತನ್ನ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು ಕೂಡ ಆದರೆ ಬಾಳಿ ಬದುಕಬೇಕಿದ್ದ ಜೀವ ವಿಧಿಯಾಟದ ಮುಂದೆ ತಲೆಬಾಗಿದೆ. ಇವರ ಅಗಲಿಕೆಗೆ ಅನೇಕ ಬಂಧು ಮಿತ್ರರು ಸಂತಾಪ ಸೂಚಿಸಿದ್ದಾರೆ.



