ಮಾಣಿ: ನಿಂತಿದ್ದ ಕ್ರೆಟಾ ಕಾರಿಗೆ ಸ್ವಿಫ್ಟ್ ಕಾರೊಂದು ಮುಂಭಾಗಕ್ಕೆ ಗುದ್ದಿ ಜಖಂ ಗೊಂಡಿರುವ ಘಟನೆ ಜು 24 ರಂದು ಸಂಜೆ ವರದಿಯಾಗಿದೆ. ಮಾಣಿ ಮೈಸೂರು ಹೆದ್ದಾರಿ ಪಾಲಡ್ಕ ಬಳಿ ರಸ್ತೆ ಬದಿ ಈ ಘಟನೆ ಸಂಭವಿಸಿದೆ. ಕುಶಾಲನಗರ ಮೂಲದವರ ಕಾರು ಕಾಸರಗೋಡಿನಿಂದ ಮಡಿಕೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ಜಖಂಗುಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.




