ಡಾ.ಕನ್ಯಾನ ಸದಾಶಿವ ಶೆಟ್ಟಿ ಭಗೀರಥ ಪರಿಶ್ರಮದಿಂದ ಉತ್ತುಂಗವೇರಿದವರು. ತನ್ನ ದುಡಿಮೆಯ ಒಂದAಶವನ್ನು ಸಮಾಜಕ್ಕೆ ಅರ್ಪಿಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿರುವ ಅಶಕ್ತರ ಪಾಲಿಗೆ ಬೆಳಕಾಗಬೇಕೆಂದು ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಕನ್ಯಾನ ಡಾ.ಸದಾಶಿವ ಶೆಟ್ಟಿಯವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ ಮತ್ತು ಅಪಘಾತ ವಿಮೆಯ ಯೋಜನೆಯು ಈಗಾಗಲೇ ಕೈಗೂಡಿದೆ.

ಇದರ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ನಡೆದಿದೆ. ಕನ್ಯಾನ ಡಾ.ಸದಾಶಿವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿಮಾ ಪಾಲಿಸಿಯನ್ನು ಡಾ.ಸದಾಶಿವ ಶೆಟ್ಟಿಯವರು ಫಲಾನುಭವಿಗಳಿಗೆ ವಿತರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಪೋಸ್ಟಲ್ ಪೇಮೆಂಟ್ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಮಾನಸ್ ಜಾರ್ಜ್, ಡಾ.ಕೆ. ಸದಾಶಿವ ಶೆಟ್ಟಿ ಅವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಉಪಾಧ್ಯಕ್ಷರಾದ ನಾರಾಯಣ ನೈಕ್ ನಡುಹಿತ್ಲು, ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲ್ ಸೇರಿದಂತೆ ಹಲವರು ಭಾಗಿಯಾಗಿದ್ರು.




